ಬೆಂಗಳೂರು: ನಟ ದರ್ಶನ್ ಗ್ಯಾಂಗ್ ನ ಕ್ರೌರ್ಯ ದಿನೇದಿನೇ ಬಗೆದಷ್ಟು ಬೆಳಕಿಗೆ ಬರುತ್ತಿದ್ದು, ಇದೀಗ ಗರಡಿ ಚಿತ್ರದ ಹಿರೋ ಯಶಸ್ ಸೂರ್ಯ ನಿಗೆ ಹರಡಿಕೊಂಡಿದೆ.
ರೇಣುಕಾ ಸ್ವಾಮಿ ಹತ್ಯೆಗೂ ಮುನ್ನ ದರ್ಶನ್ ಮತ್ತು ಗ್ಯಾಂಗ್ ರಾಜರಾಜೇಶ್ವರಿ ನಗರದ ಸ್ಟೋನಿ ಬ್ರ್ಯೂಕ್ ರೆಸ್ಟೋರೆಂಟ್ ನಲ್ಲಿ ಪಾರ್ಟಿ ಮಾಡಿದ್ದರು. ಈ ಪಾರ್ಟಿಯಲ್ಲಿ ನಟ ಚಿಕ್ಕಣ್ಣ ಮತ್ತು ಗರಡಿ ಚಿತ್ರದ ನಾಯಕ ನಟ ಯಶಸ್ ಸೂರ್ಯ, ಭಾಗವಹಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಚಿಕ್ಕಣ್ಣನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಇದೀಗ ಗರಡಿ ಚಿತ್ರದ ನಾಯಕ ನಟ ಯಶಸ್ ಸೂರ್ಯ ನಿಗೆ ಪೊಲೀಸರು ನೊಟೀಸ್ ನೀಡಿದ್ದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ನೊಟೀಸ್ ಗೆ ಈವರೆಗೆ ಸೂರ್ಯ ಯಾವುದೇ ಪ್ರತ್ಯುತ್ತರ ನೀಡಿಲ್ಲ. ಇಂದು ಸಂಜೆ ವೇಳೆಗೆ ಪೊಲೀಸರ ಮುಂದೆ ಹಾಜರಾಗಿ ಅವರು ಪೊಲೀಸ್ ವಿಚಾರಣೆ ಎದುರಿಸಬೇಕಾಗಿದೆ. ಇಲ್ಲವಾದಲ್ಲಿ ಪೊಲೀಸರು ಬಂಧಿಸಿ ಕರೆತರುವ ಸಾಧ್ಯತೆ ಇದೆ.

