ಸಂಭಾಜಿನಗರ (ಮಹಾರಾಷ್ಟ್ರ) : ಯುವತಿಯೊಬ್ಬಳು ಕಾರಿನಲ್ಲಿ ರೀಲ್ಸ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಘಟನೆ ಇಂದು ಮಹಾರಾಷ್ಟ್ರದಲ್ಲಿ ನಡೆದಿದೆ.
ಮೃತ ದುರ್ದೈವಿ ಶ್ವೇತಾ (25) ತನ್ನ ಮೂವರು ಗೆಳೆಯರನ್ನು ಒಳಗೊಂಡಂತೆ ಸುಲಿಭಂಜನ್ ಗ್ರಾಮದಲ್ಲಿರುವ ದತ್ತ ಮಂದಿರಕ್ಕೆ ಪ್ರವಾಸಕ್ಕೆ ಹೋಗಿದ್ದರು.
ಕಾರನ್ನು ಬೆಟ್ಟದ ತುದಿಯ ಮೇಲೆ ನಿಲ್ಲಿಸಿದ್ದಾರೆ. ಬಳಿಕ ರೀಲ್ಸ್ ಮಾಡಲು ಯೋಚಿಸಿ ಕಾರಿನೊಳಗೆ ಕೂತಿದ್ದಾಳೆ. ಕಾರು ರಿವಾರ್ಸ ಗೆರಿನಲ್ಲಿ ಇದ್ದದ್ದನ್ನು ಗಮನಿಸದೆ ಎಕ್ಸಿಲೇಟರ್ ತುಳಿದಿದ್ದಾಳೆ. ಕಾರು ವೇಗವಾಗಿ ಪ್ರಪಾತಕ್ಕೆ ಬಿದ್ದಿದೆ. ಶ್ವೇತಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈಗ ಈ ವಿಡಿಯೋ ವೈರಲ್ ಆಗುತ್ತಿದೆ.

