ಶಿವಮೊಗ್ಗ : ಪದೆ ಪದೆ ರೈಲು ಅಪಘಾತಗಳು ನಡೆಯುತ್ತಿರುವುದರಿಂದ ಇದರ ನೈತಿಕ ಹೊಣೆ ಹೊತ್ತು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ತತಕ್ಷಣ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಮಂಗಳವಾರ ಶಿವಮೊಗ್ಗ ನಗರ ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಎಸ್.ಶಿವಕುಮಾರ್ ನೇತೃತ್ವ್ವದಲ್ಲಿ ಜಿಲ್ಲಾಧಿಕಾರಿಗೆೆ ಮನವಿ ಸಲ್ಲಿಸಲಾಯಿತು.
ಸೋಮವಾರ ಪಶ್ಚಿಮ ಬಂಗಾಳದ ಡಾರ್ಜಲಿಂಗ್ ಜಿಲ್ಲೆಯಲ್ಲಿ ಕಾಂಚನ್ ಜುಂಗಾ ಎಕ್ಸ್ಪ್ರೆಸ್ ರೈಲಿಗೆ ಸರಕು ಸಾಗಾಣೆ ರೈಲು ಹಿಂದಿನಿAದ ಡಿಕ್ಕಿ ಹೊಡೆದು ಎಕ್ಸ್ಪ್ರೆಸ್ ರೈಲಿನ ನಾಲ್ಕು ಬೋಗಿಗಳು ಹಳಿ ತಪ್ಪಿದ ಪರಿಣಾಮವಾಗಿ ೯ ಜನ ಮೃತ ಪಟ್ಟಿರುತ್ತಾರೆ. ಸರಕು ಸಾಗಾಣೆ ರೈಲಿನ ಪೈಲೆಟ್ ಹಾಗೂ ಸಹ ಪೈಲೆಟ್ ಮತ್ತು ಪ್ರಯಾಣಿಕ ರೈಲಿನ ಗಾರ್ಡ್ ಕೂಡ ಮೃತ ಪಟ್ಟಿರುತ್ತಾರೆ. ಹಾಗೂ ಸುಮಾರು ೪೧ ಕ್ಕೂ ಹೆಚ್ಚಿನ ಜನಕ್ಕೆ ಗಾಯಗಳಾಗಿವೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
೨೦೧೪ ರಲ್ಲಿ ದೇಶಕ್ಕೆ ಬುಲೆಟ್ ರೈಲು ಕೊಡುತ್ತೇವೆ ಎಂದು ಅಧಿಕಾರಕ್ಕೆ ಬಂದಿರುವ ರೈಲುಗಳಿಗೆ ಸಿಗ್ನಲ್ ಕೊಡಲು ಇವರಲ್ಲಿ ಕಾರ್ಮಿಕರಿಲ್ಲ. ಕೇಂದ್ರ ಸರ್ಕಾರದವರು ರೈಲಿನ ಚೇರ್ ಮತ್ತು ಶೌಚಾಲಯದ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ತೋರಿಸಿಕೊಂಡು ಜನರಿಗೆ ಮೋಸ ಮಾಡುತ್ತಿದ್ದಾರೆ. ರೈಲು ಅಪಘಾತಗಳು ಹೆಚ್ಚುತ್ತಿರುವುದರಿಂದ ಇದರ ನೈತಿಕ ಹೊಣೆ ಹೊತ್ತು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ತತಕ್ಷಣ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಶಿವಮೊಗ್ಗ ನಗರ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಶಿವಕುಮಾರ್, ಹೆಚ್.ಸಿ.ಯೋಗೇಶ್, ಬಾಲಾಜಿ, ರಂಗೇಗೌಡ, ಗಿರೀಶ್, ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

