ಅಪರಾಧ ಸಿನಿಮಾ ಸುದ್ದಿ

ರೇಣುಕಾ ಸ್ವಾಮಿ ಕೊಲೆ ಆರೋಪಿ, ನಟ ದರ್ಶನ್‌ಗೆ ಕಠಿಣ ಶಿಕ್ಷೆ ಆಗಲಿ

Share It

ಶಿಕಾರಿಪುರ : ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಖಂಡಿಸಿ, ನಟ ದರ್ಶನ್‌ಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿ ಪಟ್ಟಣದಲ್ಲಿ ವೀರಶೈವ ಮಹಾಸಭೆ ವತಿಯಿಂದ ಮಂಗಳವಾರ ಬಸ್‌ನಿಲ್ದಾಣ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.

ವೀರಶೈವ ಮಹಾಸಭೆ ಅಧ್ಯಕ್ಷ ಎನ್.ವಿ.ಈರೇಶ್ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಪ್ರತಿಕ್ರಿಯೆಗೆ ನಟ ದರ್ಶನ್ ಅವರ ಅಭಿಮಾನಿಗೆ ಕಿರುಕುಳ ನೀಡಿ ಹತ್ಯೆ ಮಾಡಿರುವುದು ಮಾನಸ ಸಮಾಜ ತಲೆತಗ್ಗಿಸುವಂತಹದ್ದು ಇಡೀ ಘಟನೆ ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದ್ದು ಅದಕ್ಕೆ ಪೊಲೀಸರು ಅವಕಾಶ ನೀಡಬಾರದು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ವೀರಶೈವ ಮಹಾಸಭೆ ಒತ್ತಾಯಿಸುತ್ತದೆ ಎಂದರು.

ಸಮಾಜ ಬಾಂಧವರು ದರ್ಶನ್ ಸಂಗಡಿಗರ ವಿರುದ್ಧ ಘೋಷಣೆ ಕೂಗುತ್ತಾ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿದರು. ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಲಾಯಿತು.

ಕುಮಾರಸ್ವಾಮಿ, ಶಿವಾನಂದಶಾಸ್ತ್ರಿ, ಅಶ್ವಿನ್ ಕಡ್ಡಿಪುಡಿ, ಪುಟ್ಟಸ್ವಾಮಿ, ಪ್ರಭುಸ್ವಾಮಿ ಸಾಲೂರು, ಕಾಂಚನ ಕುಮಾರ್, ಜ್ಯೋತಿಸಿದ್ಧಲಿಂಗೇಶ್, ಹೇಮಾವತಿ ಹಿರೇಮಠ, ಶಶಿಧರಸ್ವಾಮಿ ಕಣಿವೆಮನೆ, ವೀರನಗೌಡ, ಬಿ.ಎಂ.ಚನ್ನವೀರಯ್ಯ ಇತರರಿದ್ದರು.


Share It

You cannot copy content of this page