ಶಿರಾ: ತಾಲ್ಲೂಕಿನ ಹೊರ ವಲಯದಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ಕಾಮಗಾರಿಗೆ ಸಂಬಧಿಸಿದಂತೆ ಮನಗಳವಾರ ಕೆ.ಎಸ್.ಸಿ.ಎ ಜೊತೆ ಟಿ.ಬಿ.ಜಯಚಂದ್ರ ಪರಿಶೀಲಿಸಿದರು.
ಟಿಬಿ ಜಯಚಂದ್ರ ಮಾತನಾಡಿ ಖೇಲೋ ಭಾರತ್ ಯೋಜನೆ ಅಡಿಯಲ್ಲಿ ಈ ಕಾಮಗಾರಿ ನಡೆಯುತ್ತಿದೆ. ಭೂವನಹಳ್ಳಿ, ಕಲ್ಲು ಕೋಟೆಯ ಅಕ್ಕ ಪಕ್ಕದಲ್ಲಿ 100 ಎಕ್ಕರೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲು ಉದ್ದೇಶಸಲಾಗಿದೆ ಎಂದರು.
ಇದರಿಂದ ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಉಪಯೋಗವಾಗಲಿದೆ. ಕ್ರೀಡಾಂಗಣಕ್ಕೆ ಬರಲು 100 ಅಡಿ ಅಗಲದ ರಸ್ತೆಯನ್ನು ಮಾಡಲಾಗುವುದು. ರೈಲಿನ ವ್ಯವಸ್ಥೆ ಕೂಡ ಕ್ರೀಡಾಂಗಣಕ್ಕೆ ಮಾಡಲಾಗುತ್ತದೆ ಎಂದರು.
ಕೆ ಎಸ್ ಸಿ ಎ ಅಧ್ಯಕ್ಷ ರಘುರಾಮ್ ಭಟ್ ಮಾತನಾಡಿ, ಉನ್ನತ ಮಟ್ಟದ ಕ್ರೀಡಾಂಗಣವನ್ನು ನಿರ್ಮಾಣ ಮಾಡಲು ಈ ಸ್ಥಳ ಸೂಕ್ತವಾಗಿದೆ. ಮುಂದಿನ ವಾರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿಯನ್ನು ನೀಡುತ್ತಾರೆ. ನಂತರ ಮುಂದಿನ ಪ್ರಕ್ರಿಯೆ ಆರಂಭವಾಗುತ್ತದೆ ಎಂದು ಹೇಳಿದರು.

