ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗ್ತಾರಾ?
ಹೀಗೊಂದು ಅನುಮಾನ ಎರಡು ಮೂರು ದಿನಗಳಿಂದ ರಾಜಕೀಯ ವಲಯದಲ್ಲಿ ಕಾಡುತ್ತಿದೆ. ನೆನ್ನೆ ಚನ್ನಪಟ್ಟಣ ತಾಲೂಕಿನ ಮುತ್ತತ್ತಿ ಹನುಮಂತರಾಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಡಿಕೆಶಿ, ಕೂಡ ನನ್ನ ಹೊಸ ರಾಜಕೀಯ ಶಕೆ ಇಲ್ಲಿಂದ ಆರಂಭವಾಗಲಿದೆ ಎಂದು ಹೇಳಿಕೆ ನೀಡುವ ಮೂಲಕ ಇಂತಹದ್ದೊAದು ಅನುಮಾನ ಮೂಡಿಸಿದ್ದಾರೆ. ಆದರೆ, ಅವರೇ ಅಭ್ಯರ್ಥಿಯಾಗ್ತಾರಾ ಎಂಬ ಬಗ್ಗೆ ಮಾತ್ರ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.
ಈ ನಡುವೆ ಬಿಜೆಪಿ ಮಾಜಿ ಸಚಿವ ಹಾಗೂ ಶಾಸಕ ಸುರೇಶ್ ಕುಮಾರ್ ತಮ್ಮ ಸಾಲಾಜಿಕ ಜಾಲತಾಣದಲ್ಲಿ ಡಿ.ಕೆ. ಶಿವಕುಮಾರ್, ಈಗಾಗಲೇ ಶಾಸಕರಾಗಿದ್ದು, ಮತ್ತೇ ಶಾಸನ ಸಭೆಗೆ ಸ್ಪರ್ಧೆ ಮಾಡುವುದು ಎಷ್ಟು ಸರಿ? ಎರಡು ಕಡೆ ಸ್ಪರ್ಧೆ ಮಾಡಬಹುದು. ಆದರೆ, ಗೆದ್ದ ನಂತರ ಒಂದು ಕಡೆಗೆ ರಾಜೀನಾಮೆ ಕೊಡಲು ಬೇಕು. ಹೀಗೆ ರಾಜೀನಾಮೆ ಕೊಡುವುದು, ಮತ್ತೇ ಚುನಾವಣೆ ಎದುರಿಸುವುದು ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ ಎಂದಿದ್ದಾರೆ.
ಡಿಕೆಶಿ ಲೆಕ್ಕಾಚಾರವೇನು?: ಬೆಂಗಳೂರು ಗ್ರಾಮಾಂತರದ ಸೋಲು, ಡಿಕೆಶಿ ಅವರನ್ನು ಕಂಗೆಡಿಸಿದೆ. ಈ ಸೋಲಿಗೆ ಚನ್ನಪಟ್ಟಣದಲ್ಲಿ ಸೇಡು ತೀರಿಸಿಕೊಳ್ಳಬೇಕು ಎಂಬುದು ಡಿಕೆಶಿ ಲೆಕ್ಕಾಚಾರ ಎನ್ನಲಾಗಿದೆ. ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾದ ಸ್ಥಾನವಾದ್ದರಿಂದ ಅಲ್ಲಿ ಗೆದ್ದು, ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರಿಬ್ಬರಿಗೂ ಟಾಂಗ್ ಕೊಡುವುದು ಡಿಕೆಶಿ ಲೆಕ್ಕಾಚಾರವಾಗಿದೆ. ಆದರೆ, ಅಲ್ಲಿ ಗೆದ್ದರೂ, ಕನಕಪುರದ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ.

