ರಾಜಕೀಯ ಸುದ್ದಿ

ಡಿಕೆಶಿ ವೇಗ ಕುಗ್ಗಿಸಲು ಡಿಸಿಎಂ ಕೂಗು:ಸಿಟಿ ರವಿ

Share It

ಕಲಬುರಗಿ: ಡಿಸಿಎಂ ಹುದ್ದೆ ರಾಜ್ಯದ ಅಭಿವೃದ್ಧಿಗೆ ವೇಗ ಹೆಚ್ಚಿಸಲು ಸೃಷ್ಠಿಸುತ್ತಿರುವುದಲ್ಲ. ಡಿಸಿಎಂ ಡಿಕೆಶಿ ವೇಗಕ್ಕೆ ಬ್ರೇಕ್ ಹಾಕಲು ಹೆಚ್ಚಿಸುತ್ತಿದ್ದಾರೆ ಅಷ್ಟೆ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಹೇಳಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಡಿಸಿಎಂ ಹುದ್ದೆ ಹೆಚ್ಚಿಸುವ ವಿಚಾರದ ಕುರಿತು ‌ಪ್ರತಿಕ್ರಿಯೆ ನೀಡಿದರು. ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಕುರ್ಚಿತನಕ ಬರಬಾರದು ಅಂತ, ಡಿಸಿಎಂ ಹುದ್ದೆ ಸೃಷ್ಠಿಸಿ, ಡಿಸಿಎಂ ಡಿಕೆಶಿ ವೇಗಕ್ಕೆ ಬ್ರೇಕ್ ಹಾಕಲು ನಡೆದಿರು ಪ್ರಯತ್ನ. ಡಿಕೆಶಿ ಇವಾಗ ಗುಟುರು ಹಾಕೋಕು ಆಗ್ತಿಲ್ಲ. ಇವಾಗ ಎಲ್ಲರು ಹೆಚ್ಚುವರಿ ಡಿಸಿಎಂ ಬೇಡಿಕೆ ಇಡೋದಕ್ಕೆ ಮುಂದಾಗಿದ್ದಾರೆ. ಈ ದಂಗಲ್ ಸರ್ಕಾರದ ಪತನದವರೆಗೂ ಹೋಗಬಹುದು. ಕೆಲವು ಶಾಸಕರಿಗೆ ಮೃಷ್ಟಾನ್ನ ಭೋಜನ ಇನ್ನುಳಿದವರಿಗೆ ಏನು ಇಲ್ಲ. ಅತೃಪ್ತ ಶಾಸಕರು ಮುಂಬೈ ಹೈದ್ರಾಬಾದ್ ಗೂ ಹೋಗಿ ಬಂದಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದರು.

ಪಂಚಭೂತಗಳ ಮೇಲೆ ಟ್ಯಾಕ್ಸ್..!ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಎಲ್ಲಾ ರೀತಿಯ ಬೆಲೆ ಏರಿಕೆಯಾಗಿದೆ. ರೈತರ ಪಹಣಿ, ಆದಾಯ ಪ್ರಮಾಣ ಪತ್ರ, ಮರಣ ಪ್ರಮಾಣ ಪತ್ರ ಫಿಸ್ ಹೆಚ್ಚಿಗೆ ಮಾಡಲಾಗಿದೆ. ಸಿದ್ದರಾಮಯ್ಯ ವಿಪಕ್ಷ ನಾಯಕನಾಗಿದ್ದಾಗ ಇಂಧನ ಬೆಲೆ ಏರಿಕೆಯಾದರೆ ಎಲ್ಲಾದರ ದರ ಏರಿಕೆಗೆ ರಹದಾರಿ ಎಂದಿದ್ರು. ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಇಂತಹ ಕುಖ್ಯಾತಿಗೆ ಒಳಗಾಗಿದ್ದಾರೆ.

ಬಿತ್ತನೆ ಬೀಜ ಬೆಲೆ ಕೂಡ ಏರಿಕೆ ಮಾಡಿದ್ದಾರೆ. ನೀರಿನ ದರ ಹೆಚ್ಚಳ ಮಾಡುವುದು ಅನಿವಾರ್ಯವೆಂದು ಡಿಸಿಎಂ ಹೇಳಿದ್ದಾರೆ. ಕೊಡೊದೆ ಕಲುಷಿತ ನೀರು. ಅದರ ಬೆಲೆನು ಹೆಚ್ಚಳ ಮಾಡ್ತಿದಾರೆ. ಗಾಳಿ ಮೇಲೂ ಟ್ಯಾಕ್ಸ್ ಹಾಕಿದ್ರೆ ಮುಗಿತು. ಪಂಚಭೂತಗಳ ಮೇಲೆ ಟ್ಯಾಕ್ಸ್ ಹಾಕಿದ ಹಾಗೇ ಆಗುತ್ತೆ. ನಮ್ಮ ಖಜಾನೆ ತುಂಬಿ ತುಳುಕ್ತಾಯಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳ್ತಾರೆ. ಗುತ್ತಿಗೆ ಶಿಕ್ಷಕರಿಗೆ 13 ತಿಂಗಳಿನಿಂದ ಸಂಬಳ ನೀಡಿಲ್ಲ ಎಂದು ಆರೋಪಿಸಿದರು.


Share It

You cannot copy content of this page