ಸುದ್ದಿ

ದೇವೇಗೌಡರಿಗೆ ಪತ್ನಿ ವಿಯೋಗ: ಜಮೀರ್ ಅಹಮದ್ ಖಾನ್ ಸಂತಾಪ

Share It

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಧರ್ಮಪತ್ನಿ ಹಾಗೂ ನನಗೆ ತಾಯಿ ಸಮಾನಾರಾಗಿದ್ದ ಶ್ರೀಮತಿ ಚನ್ನಮ್ಮ ಅವರ ನಿಧನದ ಸುದ್ದಿ ಕೇಳಿ ತೀವ್ರ ನೋವಾಗಿದೆ ಎಂದು ಮಾಜಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.

ನನ್ನ ರಾಜಕೀಯ ಗುರುಗಳಾದ ದೇವೇಗೌಡರ ಧರ್ಮ ಪತ್ನಿ ಚೆನ್ನಮ್ಮ ಅವರಿಗೆ ದೇವರ ಬಗ್ಗೆ ಅಪಾರ ಭಕ್ತಿ. ನನಗೂ ಹಲವಾರು ಬಾರಿ ಅವರ ಆಶೀರ್ವಾದ ಭಾಗ್ಯ ಸಿಕ್ಕಿದೆ.

ಚೆನ್ನಮ್ಮ ಅವರ ಆತ್ಮಕ್ಕೆ ಶಾಂತಿ ದೊರಕಲಿ. ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ಅವರ ಕುಟುಂಬ ವರ್ಗ ಹಾಗೂ ಅಭಿಮಾನಿಗಳಿಗೆ ದೇವರು ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಜಮೀರ್ ಅಹಮದ್ ಖಾನ್ ಸಂತಾಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.


Share It

You cannot copy content of this page