ತುಮಕೂರು : ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಲಿಂಕ್ ಯೋಜನೆಯನ್ನು ವಿರೋಧಿಸಿ ಮಂಗಳವಾರ ಬಂದ್ ಗೆ ಕರೆ ನೀಡಲಾಗಿತ್ತು.
ಅದರಂತೆ ಎಂ ಜಿ ರಸ್ತೆ, ಬಿ. ಎಚ್ ರಸ್ತೆ ಹಾಗೂ ಮಂಡಿ ಪೇಟೆಯ ಅಂಗಡಿಗಳನ್ನು ತೆರೆಯದೆ ಬಂದ್ ಗೆ ಸಾಥ್ ನೀಡಿದರು. ಆಟೋ ಮತ್ತು ಬಸ್ ಸಂಚಾರ ಎಂದಿನಂತೆಯೇ ಇತ್ತು.
ಈ ಯೋಜನೆಯನ್ನು ವಿರೋಧಿಸಿ ಹೋರಾಟ ಸಮಿತಿಯ ಮುಖ್ಯಸ್ಥರಾದ ಸೊಗಡು ಶಿವಣ್ಣ ಒಳಗೊಂಡಂತೆ ಬೆಳಗ್ಗೆ ಶಿವಕುಮಾರ ಸ್ವಾಮೀಜಿ ಸರ್ಕಲ್ ನಿಂದ ಪ್ರತಿಭಟನೆ ನಡೆಸಿದರು. ಸರ್ಕಾರಕ್ಕೆ ದಿಕ್ಕಾರ ಕೂಗಿದರು. ಈ ಯೋಜನೆಯನ್ನು ಕೈ ಬಿಡಬೇಕೆಂದು ಒತ್ತಾಯಿಸಿದರು.
ಹೋರಾಟದಲ್ಲಿ ಜೆಡಿಎಸ್ ಬಿಜೆಪಿ ಮುಖಂಡರು, ಆಟೋ ಯೂನಿಯನ್, ರೈತ ಸಂಘಗಳು, ವಕೀಲರ ಸಂಘ, ಕನ್ನಡ ಪರ ಸಂಘಟನೆಗಳು, ಮಠಾಧೀಶರು, ಹೋಟೆಲ್ ಮಾಲೀಕರು ಬಂದ್ ಗೆ ಸಹಕಾರ ನೀಡಿದರು.

