ರಾಜಕೀಯ ಸುದ್ದಿ

ಉಪಚುನಾವಣೆ ತಾಲೀಮು: ಬಿಜೆಪಿ ಹೈಕಮಾಂಡ್ ನಿಂದ ವಿಜಯೇಂದ್ರಗೆ ಬುಲಾವ್

Share It


ನವದೆಹಲಿ: ಮೂರು ಸಂಸದರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಗಳಿಗೆ ನಡೆಯುವ ಉಪಚುನಾವಣೆ ಕಣ ರಂಗೇರುತ್ತಿದ್ದು, ಈ ಸಂಬಂಧ ಚರ್ಚಿಸಲು ಬಿಜೆಪಿ ಹೈಕಮಾಂಡ್ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ದೆಹಲಿಗೆ ಕರೆಸಿಕೊಂಡಿದೆ.

ಸಂಡೂರು, ಶಿಗ್ಗಾವಿ ಮತ್ತು ಚನ್ನಪಟ್ಟಣ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಚನ್ನಪಟ್ಟಣದಲ್ಲಿ ಮೈತ್ರಿ ಪಕ್ಷ ಜೆಡಿಎಸ್ ಪ್ರಾಬಲ್ಯವಿದೆ. ಹೀಗಾಗಿ, ಜೆಡಿಎಸ್ ಗೆ ಟಿಕೆಟ್ ಕೊಡಬೇಕಾ? ಅಥವಾ ತಮ್ಮ ಪಕ್ಷದ ಅಭ್ಯರ್ಥಿಯನ್ನೇ ಜೆಡಿಎಸ್ ಚಿಹ್ನೆಯಲ್ಲಿ ಕಣಕ್ಕಿಳಿಸಬೇಕಾ ಎಂಬೆಲ್ಲ ಗೊಂದಲಗಳು ಬಿಜೆಪಿಯನ್ನು ಕಾಡುತ್ತಿವೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಚರ್ಚೆಗೆ ದೆಹಲಿ ಕಡೆಗೆ ವಿಜಯೇಂದ್ರ ದೌಡಾಯಿಸಿದ್ದಾರೆ ಎನ್ನಲಾಗಿದೆ.

ಬೆಂಗಳೂರು ಗ್ರಾಮಾಂತರ ಲೋಕಸಭೆ ಚುನಾವಣೆಯಲ್ಲಿ ಸೋತಿರುವ ಡಿ.ಕೆ ಬ್ರದರ್ಸ್, ಚನ್ನಪಟ್ಟಣ ಚುನಾವಣೆ ಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಹೀಗಾಗಿ, ಈಗಾಗಲೇ ತಾಲೀಮು ನಡೆಸುತ್ತಿದ್ದಾರೆ. ಅಲ್ಲಿನ ಬೆಳವಣಿಗೆಗಳನ್ನು ಗಮನಿಸಿದರೆ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ ಸ್ವತಃ ಅಭ್ಯರ್ಥಿಯಾದರೂ ಆಶ್ವರ್ಯವಿಲ್ಲ. ಹೀಗಾಗಿ, ಬಿಜೆಪಿ ಸೂಕ್ತ ರಣತಂತ್ರದ ಜತೆಗೆ ಕಣಕ್ಕಿಳಿಯಬೇಕಿದೆ.

ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೈಪೋಟಿ ಇದ್ದು ಅಲ್ಲಿ ಅಭ್ಯರ್ಥಿ ಆಯ್ಕೆ ಸ್ವಲ್ಪ ಸುಲಭ ಎನ್ನಬಹುದು. ಶಿಗ್ಗಾವಿ ಕ್ಷೇತ್ರದ ಟಿಕೆಟ್ ಬೊಮ್ಮಾಯಿ ಅವರ ಕುಟುಂಬಕ್ಕೆ ಕೊಡಬೇಕಾ ಅಥವಾ ಬೇರೆಯವರಿಗೆ ಕೊಡಬೇಕಾ ಎಂಬೊಂದು ಚರ್ಚೆ ನಡೆಯುತ್ತಿದೆ. ಈ ಎಲ್ಲ ಹಿನ್ನೆಲೆಯಲ್ಲಿ ವಿಜಯೇಂದ್ರ ಹೈಕಮಾಂಡ್ ಜತೆ ಚರ್ಚೆ ನಡೆಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.


Share It

You cannot copy content of this page