ಸಿನಿಮಾ ಸುದ್ದಿ

ಸಿದ್ದು ಪೂರ್ಣಚಂದ್ರ ಸಾರಥ್ಯದಲ್ಲಿ ಮತ್ತೊಂದು ದೃಶ್ಯ ಕಾವ್ಯ

Share It

ಬೆಂಗಳೂರು: ‘ದಾರಿ ಯಾವುದಯ್ಯ ವೈಕುಂಠಕ್ಕೆ’, ‘ತಾರಿಣಿ’ಯಂತಹ ಸಾಮಾಜಿಕ ಕಾಳಜಿ ದೃಶ್ಯ ಕಾವ್ಯಗಳನ್ನು ಸೃಷ್ಟಿಸಿದ ಸೃಜನಶೀಲ ನಿರ್ದೇಶಕ ಸಿದ್ದು ಪೂರ್ಣಚಂದ್ರ ನೇತೃತ್ವದಲ್ಲಿ ತೆರೆಗೆ ಬರಲು ಮತ್ತೊಂದು ಚಿತ್ರ ಸಿದ್ಧವಾಗುತ್ತಿದೆ.

ಈ ಪಾದ ಪುಣ್ಯ ಪಾದ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಕತೆ, ಚಿತ್ರಕತೆ, ಸಂಭಾಷಣೆ ಮತ್ತು ನಿರ್ದೇಶನ ಸಿದ್ದು ಪೂರ್ಣಚಂದ್ರ ಅವರದದ್ದಾರೆ, ಪ್ರಮೀಳಾ ಸುಬ್ಬರಾಜು, ಎ.ಕೆ.ಪುಟ್ಟರಾಜು ನಿರ್ಮಾಪಕರಾಗಿದ್ದಾರೆ. ರಾಜು ಹೆಮ್ಮಿಗೆ ಪುರ ಅವರ ಕ್ಯಾಮೆರಾ ಕೈಚಳಕವಿದ್ದು, ಅನಂತ್ ಆರ್ಯನ್ ಅವರ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

ಚಿತ್ರದ ಶೀರ್ಷಿಕೆಯೇ ವಿಭಿನ್ನವಾಗಿದ್ದು ಕತೆಯ ಎಳೆಯನ್ನು ನಿರ್ದೇಶಕರು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಇತ್ತೀಚೆಗೆ ಬಿಡಿಗಡೆಯಾಗಿರುವ ಪೋಸ್ಟರ್ ನಲ್ಲಿರುವ ಶ್ರವಣಬೆಳಗೊಳದ ತ್ಯಾಗಮೂರ್ತಿ ಶ್ರೀ ಬಾಹುಬಲಿಯ ಪಾದದ ಚಿತ್ರವನ್ನು ಬಳಸಿಕೊಂಡಿದ್ದು, ಅದೇನೋ ಮಹತ್ತರವಾದುದ್ದು ಹೇಳಿವ ಮುನ್ಸೂಚನೆ ನೀಡಿದ್ದಾರೆ ನಿರ್ದೇಶಕರು.

ಶೀಘ್ರದಲ್ಲೇ ತಾರಾ ಬಳಗ ಮತ್ತು ಇನ್ನುಳಿದ ಪಾತ್ರವರ್ಗ ಅಂತಿಮವಾಗಲಿದ್ದು, ಶೀಘ್ರವೇ ಚಿತ್ರೀಕರಣ ಆರಂಭಿಸಲು ಚಿತ್ರತಂಡ ತಯಾರಿ ನಡೆಸಿಕೊಳ್ಳುತ್ತಿದೆ. ಚಿತ್ರೀಕರಣದ ಲೊಕೇಶನ್, ಕತೆ, ಪಾತ್ರವರ್ಗದ ಬಗ್ಗೆ ಗುಟ್ಟು ಬಿಟ್ಟುಕೊಡದ ಚಿತ್ರತಂಡ ಸಸ್ಪೆನ್ಸ್ ಕಾಪಾಡಿಕೊಂಡಿದೆ.

ಸಿದ್ದು ಪೂರ್ಣಚಂದ್ರ ಅತ್ಯುತ್ತಮ ಕತೆಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಹೊಸತನ್ನು ಸೃಷ್ಟಿಸುವ ನಿರ್ದೇಶಕರಾಗಿದ್ದಾರೆ. ಹಿಂದೆ ಅವರು ನಿರ್ದೇಶಿಸಿದ ತಾರಿಣಿ, ದಾರಿ ಯಾವುದಯ್ಯ ವೈಕುಂಠಕ್ಕೆ ಚಿತ್ರಗಳು ಅನೇಕ ದೇಶಗಳ ಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದುಕೊಂಡಿವೆ. ದಾಖಲೆ ಪ್ರಮಾಣದ ಪ್ರಶಸ್ತಿ ವಿಜೇತ ಚಿತ್ರಗಳ ನಿರ್ದೇಶನಕ್ಕೆ ಹೆಸರಾದ ಸಿದ್ದು ಪೂರ್ಣಚಂದ್ರ ಅವರಿಂದ ಮತ್ತೊಂದು ದೃಶ್ಯಕಾವ್ಯ ಅನಾವರಣದ ನಿರೀಕ್ಷೆ ಪ್ರೇಕ್ಷಕರದ್ದು.


Share It

You cannot copy content of this page