ಈ ಬಾರಿಯ 2024 ರ ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿದಿದ್ದವು. ಇದೇ ಮೊದಲ ಬಾರಿಗೆ ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ ದೇಶಗಳಲ್ಲಿ ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದೆ. ಈ ಬಾರಿ 20 ತಂಡಗಳು ಎ, ಬಿ, ಸಿ, ಡಿ ಹೀಗೆ 4 ಗುಂಪುಗಳಲ್ಲಿ ತಲಾ 4 ತಂಡಗಳಾಗಿ ಆಡಿದ್ದವು. ಹೀಗೆ ಪ್ರತಿ ಗುಂಪಿನಿಂದ ತಲಾ 2 ತಂಡಗಳು ಪಾಯಿಂಟ್ ಪಟ್ಟಿಯಲ್ಲಿ ಮೊದಲೆರಡು ಆದರೆ ಸ್ಥಾನ ಪಡೆದು ಸೂಪರ್-8 ಹಂತ ತಲುಪಿದ್ದವು.
ಲೀಗ್ ಹಂತದಲ್ಲಿ ಭಾರತ, ಆಸ್ಟ್ರೇಲಿಯಾ, ಪಾಕಿಸ್ತಾನ, ಇಂಗ್ಲೆಂಡ್, ಬಾಂಗ್ಲಾದೇಶ, ಕೆನಡಾ, ಐರ್ಲೆಂಡ್, ನಮೀಬಿಯಾ, ನೇಪಾಳ, ನೆದರ್ಲೆಂಡ್ಸ್, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಒಮಾನ್, ಪಪುವಾ ನ್ಯೂಗಿನಿಯಾ, ಸ್ಕಾಟ್ಲೆಂಡ್, ಶ್ರೀಲಂಕಾ, ಉಗಾಂಡ, ಕೆನಡಾ, ಅಮೆರಿಕಾ, ವೆಸ್ಟ್ ಇಂಡೀಸ್ ತಂಡಗಳು ಗುಂಪಿನಲ್ಲಿ ಆಡಿದ್ದವು. ಆದರೆ ಪ್ರತಿ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದ ಎರಡೆರಡು ತಂಡಗಳು ಅಂದರೆ ಒಟ್ಟು 16 ತಂಡಗಳು ಸೂಪರ್-8 ಹಂತ ತಲುಪಿದ್ದವು.
ತದನಂತರ ಸೂಪರ್-8 ಹಂತದಲ್ಲಿ ಎರಡು ಗುಂಪುಗಳಿಂದ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದ ತಲಾ ಎರಡೆರಡು ತಂಡಗಳು ಸೆಮಿಫೈನಲ್ ಪ್ರವೇಶಿಸಿವೆ.
ಗುಂಪು-1 ರಿಂದ ಭಾರತ ಮತ್ತು ಅಫ್ಘಾನಿಸ್ತಾನ್ ತಂಡಗಳು ಸೆಮಿಫೈನಲ್ ತಲುಪಿದರೆ, ಗುಂಪು-2 ರಿಂದ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ತಂಡಗಳು ಸೆಮಿಫೈನಲ್ ತಲುಪಿವೆ.
ಇದೀಗ ನಾಳೆ ಜೂನ್ 27 ಗುರುವಾರ ಭಾರತೀಯ ಕಾಲಮಾನ ಮುಂಜಾನೆ 6 ಗಂಟೆಯಿಂದ ಮೊದಲ ಸೆಮಿಫೈನಲ್ ಪಂದ್ಯ
ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ್ ತಂಡಗಳ ನಡುವೆ ನಡೆಯಲಿದೆ.
ಬಳಿಕ ನಾಳೆ ಜೂನ್ 27 ರ ರಾತ್ರಿ 8 ಗಂಟೆಯಿಂದ ನಡೆಯಲಿರುವ 2ನೇ ಸೆಮಿಫೈನಲ್ ಪಂದ್ಯದಲ್ಲಿ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಸೆಣಸಾಡಲಿವೆ.
ಟ್ರಿನಿಡಾಡ್-ಟೊಬೊಗೊದ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯವು ಭಾರತೀಯ ಕಾಲಮಾನ ಬೆಳಿಗ್ಗೆ 6 ಗಂಟೆಯಿಂದ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವೆ ನಡೆಯಲಿದೆ.
2ನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ವೆಸ್ಟ್ ಇಂಡೀಸ್ ದೇಶದ ಗಯಾನಾದ ಪ್ರೊವಿಡೆನ್ಸ್ ಸ್ಟೇಡಿಯಂನಲ್ಲಿ
ಸೆಣಸಾಡಲಿವೆ. ಈ ಪಂದ್ಯವು ಭಾರತೀಯ ಕಾಲಮಾನ ನಾಳೆ ರಾತ್ರಿ 8 ಗಂಟೆಯಿಂದ ಶುರುವಾಗಲಿದೆ.
ಭಾರತ vs ಇಂಗ್ಲೆಂಡ್: ಜೂನ್ 27 ರಂದು ನಡೆಯಲಿರುವ 2ನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.
ಗಯಾನಾದ ಪ್ರೊವಿಡೆನ್ಸ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ಶುರುವಾಗಲಿದೆ.
ಈ ಎರಡು ಸೆಮಿಫೈನಲ್ ಪಂದ್ಯಗಳಲ್ಲಿ ಗೆಲ್ಲುವ ತಂಡಗಳು ಫೈನಲ್ ನಲ್ಲಿ ಜೂನ್ 29 ರಂದು ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಅಂತಿಮ ಹಣಾಹಣಿಯಲ್ಲಿ ಪ್ರಶಸ್ತಿಗಾಗಿ ಸೆಣಸಾಡಲಿವೆ. ಈ ಫೈನಲ್ ಪಂದ್ಯದೊಂದಿಗೆ 9ನೇ ಆವೃತ್ತಿಯ ಟಿ-20 ವಿಶ್ವಕಪ್ಗೆ ತೆರೆ ಬೀಳಲಿದೆ.
ಈ ಎರಡು ಸೆಮಿಫೈನಲ್ನಲ್ಲಿ ಗೆಲ್ಲುವ ತಂಡಗಳು ಫೈನಲ್ಗೆ ಪ್ರವೇಶಿಸಲಿದ್ದು, ಅದರಂತೆ ಜೂನ್ 29 ರಂದು ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿರುವ ಫೈನಲ್ ಪಂದ್ಯದೊಂದಿಗೆ 9ನೇ ಆವೃತ್ತಿಯ ಟಿ20 ವಿಶ್ವಕಪ್ಗೆ ತೆರೆ ಬೀಳಲಿದೆ.

