ಕ್ರೀಡೆ ಸುದ್ದಿ

ಅಂದು ಚಪ್ರಿ ಎನ್ನುತ್ತಿದ್ದವರ ಪಾಲಿಗೆ ಇಂದು ಹೀರೋ ಆದ ಪಾಂಡ್ಯ

Share It

ಐಪಿಎಲ್ ನಲ್ಲಿ ಹಾರ್ದಿಕ್ ಪಾಂಡ್ಯ ಹಣದ ಆಸೆಗೋಸ್ಕರ ಗುಜರಾತ್ ಟೈಟಾನ್ ಬಿಟ್ಟು ಮುಂಬೈ ಇಂಡಿಯನ್ಸ್ ಸೇರಿದ ಎಂದು ಅವಮಾನ ಮಾಡಿದವರಿಗೆ ಇಂದು ವಿಶ್ವ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. ಅಂದು ಚಪ್ರಿ, ಅಹಂಕಾರಿ ಎನ್ನುತ್ತಿದ್ದವರ ಪಾಲಿಗೆ ಇಂದು ಪಾಂಡ್ಯ ಹೀರೋ.

ಹಾರ್ದಿಕ್ ಪಾಂಡ್ಯ ಹೆಂಡತಿಯಿಂದ ವಿಚ್ಚೇಧನ ಪಡೆದ ನಂತರ ಮಾನಸಿಕವಾಗಿ ಕುಗ್ಗಿಹೋಗಿದ್ದರು. ಇದು ಇವರ ಫಾರ್ಮ್ ಮೇಲೂ ಸಹ ಪರಿಣಾಮ ಬೀರಿತ್ತು. ಐಪಿಎಲ್ ನಲ್ಲಿ ಗುಜರಾತ್ ಟೈಟಾನ್ ಬಿಟ್ಟು ಮುಂಬೈ ಇಂಡಿಯನ್ಸ್ ನಾಯಕತ್ವ ವಹಿಸಿಕೊಂಡ ಹಾರ್ದಿಕ್ ಪಾಂಡ್ಯ ಯಶಸ್ವಿಯಾಗಿ ತಂಡವನ್ನು ಮುನ್ನೆಡೆಸಲು ಸಂಪೂರ್ಣವಾಗಿ ವಿಫಲರಾದರು.

ರೋಹಿತ್ ಶರ್ಮರ ಜಾಗವನ್ನು ಪಾಂಡ್ಯ ಕಿತ್ತುಕೊಂಡರು ಎಂದು ರೋಹಿತ್ ಅಭಿಮಾನಿಗಳು ಹಾರ್ದಿಕ್ ಪಾಂಡ್ಯರನ್ನು ಮೈದಾನದಲ್ಲಿಯೇ ಸಾಕಷ್ಟು ಅವಮಾಣಿಸಿದ್ದೂ ಉಂಟು. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳದ ಹಾರ್ದಿಕ್ ಪಾಂಡ್ಯ ತನ್ನ ಗುರಿಯ ಕಡೆಗೆ ಹೆಜ್ಜೆ ಹಾಕಿದರು ಅಲ್ಲಿ ಯಶಸ್ವಿಯಾದರು.

ವಿಶ್ವಕಪ್ ನಲ್ಲಿ ಪಾಂಡ್ಯ ತನ್ನ ಬ್ಯಾಟ್ ಇಂದ ಸಿಡಿಸಿದ್ದು ಬರೋಬ್ಬರಿ 144 ರನ್ ಇನ್ನೂ ಬೌಲಿಂಗ್ ಅಲ್ಲಿ 11 ವಿಕೆಟ್ ಕಬಳಿಸಿದ್ದರು. ಇದಲ್ಲದೆ ಸೌತ್ ಆಫ್ರಿಕಾದ ವಿರುದ್ಧದ ಫೈನಲ್ ಪಂದ್ಯದಲ್ಲಿ ಕೊನೆಯ ಓವರ್ ಬೌಲಿಂಗ್ ಮಾಡಿ ಹೀರೋ ಎನಿಸಿಕೊಂಡರು. ಇಂತಹ ಆಲ್ ರೌಂಡಿಗ್ ಆಟದಿಂದ ಈಗ ಜಗತ್ತಿನ ನಂಬರ್ ಒನ್ ಟಿ 20 ಆಲ್ ರೌಂಡರ್ ಆಗಿ ಹೊರ ಹೊಮ್ಮಿದ್ದಾರೆ. ಇದರ ಮೂಲಕ ಅವಮಾನಿಸಿದವರಿಗೆ, ಟೀಕಾಕಾರರಿಗೆ ಸರಿಯಾದ ಉತ್ತರ ನೀಡಿದ್ದಾರೆ.


Share It

You cannot copy content of this page