ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಸೇರಿರುವ ನಟ ದರ್ಶನ್ ಅವರಿಗೆ ಪಾಪಪ್ರಜ್ಞೆ ಕಾಡುತ್ತಿದ್ದು, ಪವಿತ್ರಾ ಸಹವಾಸ ತಮ್ಮನ್ನು ಈ ಸ್ಥಿತಿಗೆ ತಂದಿದ್ದಕ್ಕೆ ಬೇಸರಗೊಂಡಿದ್ದಾರೆ ಎನ್ನಲಾಗಿದೆ.
ದರ್ಶನ್ ಜೈಲು ಸೇರಿದ ನಂತರ, ಮಡದಿ ಮತ್ತು ಮಗನ ಭೇಟಿ ನಂತರ, ಇಷ್ಟೆಲ್ಲ ನಡೆದರೂ ತಮ್ಮನ್ನು ಉಳಿಸಿಕೊಳ್ಳಲು ಪತ್ನಿ ನಡೆಸುತ್ತಿರುವ ಪ್ರಯತ್ನ ಮತ್ತು ಬಹುದಿನಗಳ ನಂತರ ತಾಯಿ ಮತ್ತು ಸಹೋದರನ ಭೇಟಿ, ದರ್ಶನ್ ಗೆ ಮರುಜೀವ ತಂದಿದೆ. ಅವರ ಮುಂದೆ ಪವಿತ್ರಾ ಸಹವಾಸ ಬೇಡ ಎಂದು ದರ್ಶನ್ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಅಷ್ಟಕ್ಕೂ ರೇಣುಕಾ ಸ್ವಾಮಿಯನ್ನು ಕೊಲೆ ಮಾಡುವಷ್ಟು ಕೋಪವೇನು ದರ್ಶನ್ ಅವರಿಗಿರಲಿಲ್ಲ. ಪವಿತ್ರಾ ಗೌಡ ಮಾಡಿದ ಹಠ ಮತ್ತು ಮುನಿಸು ದರ್ಶನ್ ಒಳಗಿನ ಮೃಗವನ್ನು ಬಡಿದೆಬ್ಬಿಸಿ, ಕೊಲೆಗೆ ಕಾರಣವಾಯಿತು. ಕೊಲೆ ವಿಷಯ ತಿಳಿಯುತ್ತಿದ್ದಂತೆ ದರ್ಶನ್ ಪವಿತ್ರಾ ಗೌಡಗೆ ಕೆನ್ನೆಗೆ ಭಾರಿಸಿದ್ದರು ಎನ್ನಲಾಗಿದೆ. ಪವಿತ್ರಾ ಆಸ್ಪತ್ರೆ ಸೇರಿದ್ದು, ದರ್ಶನ್ ಅರೆಸ್ಟ್ ಆದಾಗ ಆಸ್ಪತ್ರೆಯಿಂದ ವಾಪಸ್ ಬಂದರು ಎನ್ನಲಾಗಿದೆ.

ಕಳೆದ ಸಲ ಮಡದಿ ಮೇಲೆ ಕೈ ಮಾಡಿ ಜೈಲಿಗೆ ಹೋಗಿದ್ದಾಗಿನ ಅವಮಾನಕ್ಕಿಂತ ಈ ಸಲ ಹೆಚ್ಚಿನ ಅವಮಾನ ದರ್ಶನ್ ಗಾಗುತ್ತಿದೆ. ಕೆರೆಯರ್ ಭಯ ಅವರನ್ನು ಕಾಡುತ್ತಿದೆ. ಈಗ ಹೆಣ್ಣೊಬ್ಬಳ ಜತೆಗಿನ ಅನೈತಿಕ ಸಂಬಂಧ ಅವರನ್ನು ಕೆಣಕುತ್ತಿದೆ. ಅಭಿಮಾನಿಯನ್ನೇ ಕೊಲೆ ಮಾಡಿಸಿದ ಆರೋಪದ ಪಾಪಪ್ರಜ್ಞೆ ಅವರನ್ನು ಕಾಡುತ್ತಿದೆ.
ಮಡದಿ ಮೇಲೆ ಜಿದ್ದಿಗೆ ಬೀಳುವುದು, ಕೇಳಿದ್ದೆಲ್ಲ ಬೇಕೆನ್ನುವ ಹಠಮಾರಿ ಗುಣ ದರ್ಶನ್ ಗೆ ಸಾಕು ಸಾಕಾಗಿ ಹೋಗಿದ್ದು, ಗುಟ್ಟಾಗಿ ನಡೆಯುತ್ತಿದ್ದ ಸಂಬಂಧವೀಗ ಜಗಜ್ಜಾಹೀರಾಗಿದೆ. ಹೀಗಾಗಿ, ಆಕೆಯ ಸಹವಾಸವೇ ಬೇಡ ಎಂದು ದರ್ಶನ್ ತೀರ್ಮಾನಿಸಿದ್ದು, ಆಕೆಯ ಗೆಳತಿಯ ಸಂಧಾನದ ಮಾತುಗಳಿಗೆ ಸೊಪ್ಪು ಹಾಕಿಲ್ಲ ಎನ್ನುತ್ತಿವೆ ಜೈಲು ಮೂಲಗಳು.

ಪತ್ನಿ ಸೇರಿ ತಾಯಿ, ಸಹೋದರ ಎಲ್ಲರೂ ಮುಂದೆಯಾದರೂ ಇಂತಹದ್ದನ್ನೆಲ್ಲ ಬಿಟ್ಟು ಬದುಕುವಂತೆ ದರ್ಶನ್ ಗೆ ಸಲಹೆ ನೀಡಿದ್ದಾರಂತೆ. ಜತೆಗೆ ಆಕೆಯ ಸಹವಾಸ ಬಿಟ್ಟರಷ್ಟೇ, ನಿನಗೆ ನಮ್ಮೆಲ್ಲರ ಬೆಂಬಲ ಮತ್ತು ಪ್ರೀತಿ ಸಿಗುತ್ತದೆ ಎಂದು ತಾಕೀತು ಮಾಡಿದ್ದಾರಂತೆ. ಹೀಗಾಗಿ, ದರ್ಶನ್, ತಮಗೆ ಆಕೆ ಸಹವಾಸವೇ ಬೇಡ ಎಂದು ತೀರ್ಮಾನಿದ್ದಾರೆ ಎಂದು ಹೇಳಲಾಗುತ್ತಿದೆ.
ಪವಿತ್ರಾ ಗೆಳತಿ ದರ್ಶನ್ ಭೇ ಮಾಡಿದ್ಯಾಕೆ?: ಪವಿತ್ರಾ ಗೌಡಳ ಆತ್ಮೀಯ ಗೆಳತಿಯೊಬ್ಬಳು, ಜೈಲಿನಲ್ಲಿ ದರ್ಶನ್ ಭೇಟಿಯಾಗಿದ್ದರು. ದರ್ಶನ್ ಭೇಟಿಗೆ ಪತ್ನಿ, ಮಗ, ತಾಯಿ ಮತ್ತು ಸಹೋದರ ಬರುತ್ತಿದ್ದಂತೆ ಪವಿತ್ರಾ ಗೆ ದರ್ಶನ್ ನನ್ನಿಂದ ದೂರಾಗಬಹುದು ಎಂಬ ಭಯ ಶುರುವಾಗಿದೆ. ಹೀಗಾಗಿ, ಗೆಳತಿಯ ಮೂಲಕ ಮೇಘ ಸಂದೇಶ ಕಳಿಸಿದ್ದರು ಎನ್ನಲಾಗಿದೆ. ಆದರೆ, ಆಕೆಯ ಜತೆಗೂ ದರ್ಶನ್, ಅವಳ ಸಹವಾಸವೇ ಬೇಡ, ಅವಳಿಂದಲೇ ಇಷ್ಟೆಲ್ಲ ಆಗಿದೆ ಎಂದು ಸಿಟ್ಟಿನಿಂದ ಮಾತನಾಡಿದರು ಎನ್ನಲಾಗಿದೆ.

