ರಾಜಕೀಯ ಸುದ್ದಿ

ಸಿಎಂ ರಾಜೀನಾಮೆಗೆ ಬಿಜೆಪಿ ಟ್ವೀಟರ್ ಅಭಿಯಾನ

Share It

ಬೆಂಗಳೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಅಕ್ರಮದ ಆರೋಪದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಟ್ವಿಟರ್ ಅಭಿಯಾನ ನಡೆಸುತ್ತಿದೆ.

ಕಾರ್ಟೂನ್‌ಗಳ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯಿಸಿ, ವಿವಿಧ ಪೋಸ್ಟರ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸಿಎಂ ಪತ್ನಿಗೆ 35 ಕೋಟಿ ಮೌಲ್ಯದ ನಿವೇಶನವನ್ನು ಮಂಜೂರು ಮಾಡಲಾಗಿದೆ. ಹೀಗಾಗಿ ಸಿಎಂ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಆರೋಪಿಸಿದೆ.

ಸಿಎಂ ಪತ್ನಿಗೆ 14 ನಿವೇಶನಗಳನ್ನು ಮಂಜೂರು ಮಾಡಲಾಗಿದೆ. 60*40 ಅಳತೆಯ ಈ ಸೈಟ್‌ಗಳ ಮೌಲ್ಯ 2.40 ಕೋಟಿ ರು. ಆಗಲಿದೆ. ಅವರಿಗೆ ಮಂಜೂರಾಗಿರುವ ಒಟ್ಟು ನಿವೇಶನಗಳ ಮೌಲ್ಯ 35 ಕೋಟಿ ರು.ಆಗಲಿದೆ. ಆ ಮೂಲಕ ರಾಜ್ಯದ ಅತಿದೊಡ್ಡ ಹಗರಣ ನಡೆಸಲು ಮುಂದಾಗಿದ್ದು, 4000 ಕೋಟಿ ರು. ಅಕ್ರಮ ನಡೆದಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.

ಮೂಡಾ ಹಗರಣಕ್ಕೆ ಸಿಎಂ ಖುರ್ಚಿ ಕಾರಣ: ಮೂಡಾ ಹಗರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಈ ಹಗರಣ ಬೆಳಕಿಗೆ ಬರಲು ಸಿಎಂ ಕುರ್ಚಿ ಕಿತ್ತಾಟ ಕಾರಣ. ಕಾಂಗ್ರೆಸ್ ನಾಯಕರೊಳಗೆ ನಡೆಯುತ್ತಿರುವ ಸಿಎಂ ಕುರ್ಚಿ ಕಿತ್ತಾಟದಿಂದಾಗಿ ಈ ಹಗರಣ ಬಯಲಿಗೆ ಬಂದಿದೆ. ಕುರ್ಚಿ ಪಡೆದುಕೊಳ್ಳುವ ಸಲುವಾಗಿ ಕೆಲವರು. ಈ ಹಗರಣವನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಮೇಲೆ ಆರೋಪಿಸಿದ್ದಾರೆ.


Share It

You cannot copy content of this page