ಉಪಯುಕ್ತ ಸುದ್ದಿ

ಪವಾಡ ಪುರುಷ ಜಗದ್ಗುರು ಶ್ರೀ ನಾಗಲಿಂಗ ಅಜ್ಜನ 143 ನೇ ಆರಾಧನಾ ಮಹೋತ್ಸವ ಜುಲೈ-10 ರಿಂದ

Share It

ನವಲಗುಂದ: ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ಜಗದ್ಗುರು ಶ್ರೀ ಅಜಾತನಾಗಲಿಂಗ ಸ್ವಾಮಿ ಸುಕ್ಷೇತ್ರವಾದ ಹಲವಾರು ಲೀಲೆ, ಪವಾಡಗಳಿಂದ ಭಕ್ತರ ಮನದಲ್ಲಿ ಶಾಶ್ವತವಾಗಿ ಉಳಿದುಕೊಂಡಿದ್ದಾರೆ.
ಇದೊಂದು ಹಿಂದೂಗಳ ಮಠವಾದರೂ ಇಲ್ಲಿ ಶ್ರೀ ಅಜಾತ ನಾಗಲಿಂಗಸ್ವಾಮಿ ಗದ್ದುಗೆ, ಮೌನೇಶ್ವರ ಗದ್ದುಗೆ, ಕ್ರೆಸ್ತರ ಧರ್ಮಗ್ರಂಥ ಬೈಬಲ್ ಹಾಗೂ ಮುಸ್ಲಿಂ ಪಂಜಾಗಳು ದಿನನಿತ್ಯ ಪೂಜೆಸಲ್ಪಡುತ್ತವೆ.

ಶ್ರೀ ನಾಗಲಿಂಗಜ್ಜನ ಪವಾಡಗಳು ಶ್ರೀ ಅಜಾತ ನಾಗಲಿಂಗ ಮಹಾಸ್ವಾಮೀಜಿಗಳು ಪಟ್ಟಣದ ಭೀಮವ್ವನ ಭಕ್ತಿಯನ್ನು ಪರೀಕ್ಷ್ಷಿಸಲು ಬೀಮ್ಮವ್ವನಿಗೆ ಬೆತ್ತಲೆಯಾಗಿ ಪೇಟೆಗೆ ಹೋಗಿ ಹಣ್ಣು-ಹಂಬಲ ತರಲು ಆಜ್ಞಾಪಿಸಿದರು. ಪರಮಭಕ್ತೆ ಭೀಮವ್ವ ನಾಗಲಿಂಗಸ್ವಾಮಿಗಳ ಹೇಳಿದಂತೆ ಪೇಟೆಗೆ ಬೆತ್ತಲೇಯಾಗಿಯೇ ಹೋದಳು, ಆದರೆ ನೋಡುವವರ ಕಣ್ಣಿಗೆ ಮಾತ್ರ ಆಕೆ ಜರ್ದಾರಿ ಪೀತಾಂಬರ ಧರಿಸಿದಂತೆ ಕಂಡು ಅಂದೊಂದು ಪವಾಡವಾಗಿ ಭಕ್ತರು ಆಶ್ಚರ್ಯಚಕಿತರಾದರು.

ಬ್ರೀಟಿಷರ ಬೈಬಲ್ ಪ್ರಚಾರ ಮಾಡಲು ಗ್ರಾಮದೇವತೆ ಪೂಜಾರಿ ಮುಷ್ಟೀಗಿರಿ ಕಾಳಪ್ಪನಿಗೆ ನೀಡಿದ್ದರು. ಅಜ್ಜನವರು ಪೂಜಾರಿಯಿಂದ ಬೈಬಲ್‍ನ್ನು ತರೆಸಿ ಅದಕ್ಕೆ ಕಬ್ಬಿಣದ ಹಾರಿಯಿಂದ ರಂದ್ರ ಹಾಕಿದರು. ರಂದ್ರ ಮುಚ್ಚಿದಾಗ ಮತ್ತೆ ಆವತರಿಸುತ್ತೇನೆಂದು ಹೇಳಿದರು.

ನಾಗಲಿಂಗ ಅಜ್ಜ ಹಾಗೂ ಶಿಶುನಾಳ ಶರೀಫರು ಗ್ರಾಮದೇವತೆಗಳ ಕಟ್ಟಿಗೆಯ ಮೂರ್ತಿಗಳನ್ನು ಸುಟ್ಟು ತಮ್ಮ ಚಳಿ ಕಾಯಿಸಿಕೊಂಡು ಪೂಜಾರಿ ಅದನ್ನು ನೋಡಿ ಪಂಚಾಯತಿ ಸೇರಿಸಿದಾಗ ಗರ್ಭಗುಡಿಯಲ್ಲಿ ಯಥಾವತ್ತಾಗಿ ದೇವತೆಗಳ ಮೂರ್ತಿಗಳು ಇದ್ದವು.

ಹೊಸಳ್ಳಿ ಬೂದಿಸ್ವಾಮಿಗಳು, ಗರಗದ ಮಡಿವಾಳಜ್ಜನವರು, ಹುಬ್ಬಳ್ಳಿಯ ಸಿದ್ದಾರೂಢರು, ಶಿಶುನಾಳ ಶರೀಪಸಾಹೇಬರು, ಮೊದಲಾದ ಶರಣರು ಹಾಗೂ ಸಂತ ಮಹಾಪುರಷರೂಡಗೂಡಿ ಸಾಕಷ್ಟು ಪವಾಡಗಳನ್ನು ಮಾಡಿದ್ದು ಇತಿಹಾಸದಲ್ಲಿ ಕೇಳಿ ಬರುತ್ತವೆ. ಇಂಥ ಹಲವಾರು ಲೀಲೆಗಳನ್ನು ಮಾಡಿದ ಶ್ರೀ ನಾಗಲಿಂಗ ಅಜ್ಜನವರು 1881 ರಲ್ಲಿ ಜೀವಂತ ಸಮಾಧಿ ಹೊಂದಿದರು.

ಧರ್ಮ,ಸಂಸ್ಕ್ರತಿ,ಕಲೆಗಳನ್ನೊಳಗೊಂಡ ಶ್ರೀ ನಾಗಲಿಂಗಜ್ಜನ ಕ್ಷೇತ್ರವಾಗಿ ರಾಜ್ಯದ ಗಮನ ಸೆಳೆದಿದೆ. ಅಂತಾ ಮಹಾಮಹಿಮನ ಆರಾಧನಾ ಮಹೋತ್ಸವ ಲಕ್ಷಾಂತರ ಜನರಿಗೆ ಭಕ್ತಿ ಶ್ರದ್ದೆಗಳ ಸಮ್ಮೇಳನವಾಗಿದೆ.

ಪ್ರತಿವರ್ಷದಂತೆ ಈ ವರ್ಷ ಜುಲೈ ಹತ್ತು ರಂದು ಒಂದು ನೂರ ನಲವತ್ತು ಮೂರು ನೇ ಆರಾಧನಾ ಮಹೋತ್ಸವ ಹಾಗೂ ಮಜಾರ ಪೂಜೆ ನೆರವೇರಲಿದೆ. ಜುಲೈ ಹನ್ನೊಂದು ರಂದು ಪಲ್ಲಕ್ಕಿ ಹಾಗೂ ಮೇಣಿ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ.


Share It

You cannot copy content of this page