ಸುದ್ದಿ

ಗಂಗಮ್ಮ ದೇವಿ ಸನ್ನಿಧಾನದಲ್ಲಿ ಅಮವಾಸ್ಯೆ ಪೂಜಾ ಕೈಂಕರ್ಯ

Share It

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್‌ನ ಇತಿಹಾಸ ಪ್ರಸಿದ್ಧ ಗಂಗಮ್ಮ ದೇವಸ್ಥಾನದಲ್ಲಿ ಮಣ್ಣೆತ್ತಿನ ಅಮವಾಸ್ಯೆಯ ಅಂಗವಾಗಿ ವಿಶೇಷ ಪೂಜಾ ವಿಧಿವಿಧಾನಗಳನ್ನು ಹಮ್ಮಿಕೊಳ್ಳಲಾಗಿತ್ತು.

ಶ್ರೀ ಪಾತಾಳ ಪಂಚನಾಗೇಂದ್ರ ಸ್ವಾಮಿ ಮತ್ತು ಶ್ರೀ ಗಂಗಮ್ಮ ದೇವಿ ಅವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಶ್ರೀ ಸಾಯಿಬಾಬ ಮೂರ್ತಿಗೆ ಹಾಲಿನ ಅಭಿಷೇಕ, ಕೈಗೊಳ್ಳಲಾಗಿತ್ತು. ಪೂರ್ಣಾಹುತಿ ಹೋಮ, ಹವನ ಇತ್ಯಾದಿ ಪೂಜಾ ಕೈಂಕರ್ಯಗಳು ನೆರವೇರಿದವು.

ಗಂಗಮ್ಮ ದೇವಿ, ಸಂತಾನ ಭಾಗ್ಯ ಮತ್ತು ಬೋರ್ ವೆಲ್ ಗಳಲ್ಲಿ ನೀರು ಬರಲು ಹರಸುವ ಭಾಗ್ಯವಿದಾತೆ ಎಂಬ ನಂಬಿಕೆ ಇಲ್ಲಿಗೆ ಬರುವ ಭಕ್ತಾಧಿಗಳದ್ದಾಗಿದ್ದು, ಬಂದು ಹರಕೆ ಹೊತ್ತರೆ, ಬೇಡಿದ ಇಷ್ಟಾರ್ಥ ಈಡೇರುತ್ತದೆ ಎಂಬ ಪ್ರತೀತಿ ಇದೆ. ಹೀಗಾಗಿ, ಅವಮಾಸ್ಯೆಯ ಪೂಜೆಗೆ ಸಾವಿರಾರು ಭಕ್ತಾಧಿಗಳು ಆಗಮಿಸಿದ್ದರು.

ಗಂಗಮ್ಮ ದೇವಿಯವರಿಗೆ ನಡೆಯುವ ಮಹಾಮಂಗಳಾರತಿ ದೇವಸ್ಥಾನದ ಅತ್ಯಂತ ವಿಜೃಂಭಣೆಯ ಆಚರಣೆಯಾಗಿದ್ದು, ಸಾವಿರಾರು ಜನ ಕಣ್ತುಂಬಿಕೊAಡರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಭಕ್ತಾಧಿಗಳಿಗೆ ಅನ್ನಪ್ರಸಾದ ಸಂತರ್ಪಣೆಯನ್ನು ಆಯೋಜಿಸಲಾಗಿತ್ತು.

ಮಹಾಲಕ್ಷ್ಮಿ ಲೇಔಟ್ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ ಅವರು, ದಂಪತಿ ಸಮೇತ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದ್ದರು. ಅವರ ಜತೆಗೆ ದೇವಸ್ಥಾನದ ಪದಾಧಿಕಾರಿಗಳು, ಮುಖಂಡರು ಭಾಗವಹಿಸಿದ್ದರು.

ಆಗಸ್ಟ್ 5 ರಿಂದ ಜಾತ್ರಾ ಮಹೋತ್ಸವ: ದೇವಸ್ಥಾನದಲ್ಲಿ ಆಗಸ್ಟ್ 5 ರಿಂದ ಐದು ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದೆ. ಆಗಸ್ಟ್ 9 ರಂದು ನಾಗರ ಪಂಚಮಿ ಅಂಗವಾಗಿ ವಿಶೇಷ ಅಲಂಕಾರ ಮತ್ತು ಅಭಿಷೇಕ ಕಾರ್ಯಕ್ರಮ ಆಯೋಜಿಸಲಾಗಿದೆ. ಆಗಸ್ಟ್ 10 ರಂದು ನಡೆಯುವ ಕರಗ ಮಹೋತ್ಸವ ದೇವಸ್ಥಾನದ ವಿಶೇಷ ಎನಿಸಿದೆ. ಪ್ರತಿದಿನವೂ ಅನ್ನದಾನ ನಡೆಯಲಿದೆ.


Share It

You cannot copy content of this page