ಬೆಂಗಳೂರು: ‘ಪ್ರೆಸ್ ಕ್ಲಬ್ ಆಫ್ ಬೆಂಗಳೂರಿಗೆ’(Press Club of Bangalore) ನಿನ್ನೆ ಭಾನುವಾರ ನಡೆದ ಚುನಾವಣೆಯಲ್ಲಿ ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಶ್ರೀಧರ್.ಆರ್ ಪುನರಾಯ್ಕೆ ಆಗಿದ್ದಾರೆ. ಉಪಾಧ್ಯಕ್ಷರಾಗಿ ವಿ.ಎನ್.ಮೋಹನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಆಗಿ ಶಿವಕುಮಾರ್ ಬೆಳ್ಳಿತಟ್ಟೆ ಹಾಗೂ ಕಾರ್ಯದರ್ಶಿಯಾಗಿ ಜಿ.ವೈ.ಮಂಜುನಾಥ್ ಆಯ್ಕೆ ಆಗಿದ್ದಾರೆ.
ಇಂದು ಬೆಳಗ್ಗೆ 9 ರಿಂದ 2ಗಂಟೆ ಮತದಾನಕ್ಕೆ ಅವಕಾಶವಿದ್ದು, ಮತದಾರರು ಮತಗಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರಿಂದ ಮತಗಟ್ಟೆ ಅಧಿಕಾರಿ ಮತದಾನ ಹೆಚ್ಚಿನ ಸಮಯ ತೆಗೆದುಕೊಂಡು ಸರತಿ ಸಾಲಿನಲ್ಲಿ ನಿಂತ ಎಲ್ಲರಿಗೂ ಮತದಾನ ಮಾಡಲು ಅವಕಾಶ ನೀಡಿದರು. ಪ್ರಸಕ್ತ ಸಾಲಿನ ಪ್ರೆಸ್ ಕ್ಲಾಸ್ ಚುನಾವಣೆಯಲ್ಲಿ 1040 ಮತದಾರರಲ್ಲಿ 767 ಮತಗಳು ಚಲಾವಣೆಯಾದವು.
ಅಧ್ಯಕ್ಷ ಸ್ಥಾನಕ್ಕೆ ಧ್ಯಾನ್ ಪೂಣಚ್ಚ, ಶ್ರೀಧರ್ ಆರ್.ಮತ್ತು ಸುಭಾಶ್ ಹೂಗಾರ್ ರವರು ಸ್ಪರ್ಧೆ ಮಾಡಿದ್ದರೆ. ಉಪಾಧ್ಯಕ್ಷ ಸ್ಥಾನ, ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಚಿ ಮತ್ತು 6 ಕಮಿಟಿ ಸದಸ್ಯರುಗಳು ಮತ್ತು ಮಹಿಳಾ ಮೀಸಲು ಸ್ಥಾನಗಳಿಗೆ ಚುನಾವಣೆ ಜರುಗಿತು.
ಇನ್ನುಳಿದಂತೆ ಪ್ರೆಸ್ ಕ್ಲಬ್ ಜಂಟಿ ಕಾರ್ಯದರ್ಶಿ ಆಗಿ ಧರಣೇಶ್. ಪ್ರೆಸ್ ಕ್ಲಬ್ ಖಜಾಂಚಿ ಆಗಿ ಜಿ.ಗಣೇಶ್, ಪ್ರೆಸ್ ಕ್ಲಬ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಿವಣ್ಣ. ಯಾಸಿರ್ ಮುಸ್ತಾಕ್, ಶರಣಬಸಪ್ಪ, ಮುಮ್ತಾಜ್ ಅಲೀಮ್, ರೋಹಿಣಿ ವಿ. ಅಡಿಗ, C.R. ಮಂಜುನಾಥ್ ಹಾಗೂ ಮಹಿಳಾ ಮೀಸಲು ಸ್ಥಾನದಲ್ಲಿ ತೇಜಸ್ವಿನಿ ಆಯ್ಕೆಯಾಗಿದ್ದಾರೆ.
ಪಡೆದ ಮತಗಳ ವಿವರ
ಶ್ರೀಧರ್ ಆರ್. ಅಧ್ಯಕ್ಷರು- 404 ಮತಗಳು. ಎನ್.ಮೋಹನ್ ಕುಮಾರ್ ಉಪಾಧ್ಯಕ್ಷರು-417ಮತಗಳು. ಶಿವಕುಮಾರ್ ಬೆಳ್ಳಿತಟ್ಟೆ ಪ್ರಧಾನ ಕಾರ್ಯದರ್ಶಿ- ಮತಗಳು- 336 ಮತಗಳು.
ಜಿ.ಗಣೇಶ್, ಖಜಾಂಚಿ- 556 ಮತಗಳು, ಜಿ.ವೈ.ಮಂಜುನಾಥ್,, ಕಾರ್ಯದರ್ಶಿ- 288 ಮತಗಳು,
ಧರಣೇಶ್- ಜಂಟಿ ಕಾರ್ಯದರ್ಶಿ-195 ಮತಗಳು,
ಮಹಿಳಾ ಸ್ಥಾನ- ಮಿನಿ ತೇಜಸ್ವಿ- -491 ಮತಗಳು.
6 ಕಮಿಟಿ ಸದಸ್ಯರು– ಶಿವಣ್ಣ-234, ಶರಣಬಸಪ್ಪ-258, ಯಾಸ್ನಿಫ್ ಮುಸ್ತಾಕ್-259, ಮುತ್ತಾಜ್ ಅಲೀಮ್-272, ರೋಹಿಣಿ ಅಡಿಗ-306, ಮಂಜುನಾಥ್-281 ಮತಗಳು.

