ಸುದ್ದಿ

ಕನ್ನಡಿಗರ ಕೋಪಕ್ಕೆ ಬಲಿಯಾಯ್ತಾ ಫೋನ್ ಪೇ: ಇಡೀ ದಿನ ಸ್ಲೋ !

Share It

ಬೆಂಗಳೂರು: ಇಂದು ಇಡೀ ದಿನ ಎಲ್ಲೇ ಹೋದ್ರು ಫೋನ್ ಪೇ ಸ್ಲೋ ಎಂಬ ಸ್ಲೋಗನ್ ಸಾಮಾನ್ಯವಾಗಿತ್ತು. ಇದಕ್ಕೆ ಕಾರಣವೇನು ಎಂಬುದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆ.

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗದಲ್ಲಿ ಫೋನ್ ಪೇ ಬಹುತೇಕ ಇಂದು ವರ್ಕ್ ಆಗಿಲ್ಲ. ಎಲ್ಲೇ ಹೋದರೂ ಸರ್ವರ್ ಇಲ್ಲ ಎಂಬ ಮಾತು ಸಾಮಾನ್ಯವಾಗಿತ್ತು. ಇದರಿಂದ ಅನೇಕ ಗ್ರಾಹಕರು ಪರದಾಡುವಂತಾಗಿತ್ತು.

ಈ ಪರದಾಟಕ್ಕೆ ಕಾರಣವಾಗಿದ್ದು, ಫೋನ್ ಪೇ ಮೇಲೆ ಕನ್ನಡಿಗರ ಸಿಟ್ಟು ಕಾರಣವಾ ಎಂಬ ಪ್ರಶ್ನೆಯಂತೂ ಮೂಡದೇ ಇರದು. ಕನ್ನಡಿಗರಿಗೆ ಖಾಸಗಿ ಕಂಪನಿಯಲ್ಲಿ ಉದ್ಯೋಗ ಕಡ್ಡಾಯ ಎಂಬ ಕಾಯಿದೆ ತರಲು ಸರಕಾರ ನಿರ್ಧರಿಸಿತ್ತು. ಈ ನಿರ್ಧಾರವನ್ನು ಅನೇಕ ಖಾಸಗಿ ಕಂಪನಿಗಳು ವಿರೋಧ ಮಾಡಿದ್ದವು.

ಫೋನ್ ಪೇ ಸಿಇಒ ಬಹಿರಂಗವಾಗಿ ಕರ್ನಾಟಕ ಸರಕಾರದ ನಿರ್ಧಾರವನ್ನು ಟೀಕೆ ಮಾಡಿದ್ದರು. ಇದರಿಂದ ಫೋನ್ ಪೇ ಡಿಲೀಟ್ ಮಾಡುವ, ಅನ್ ಇನ್ಸ್ಟಾಲ್ ಮಾಡುವ ಅಭಿಯಾನ ಶುರುವಾಗಿತ್ತು. ಇದು ಫೋನ್ ಪೇ ಸಂಸ್ಥೆಗೆ ಬಹುದೊಡ್ಡ ನಷ್ಟವನ್ನುಂಟು ಮಾಡಿತ್ತು ಎನ್ನಬಹುದು.

ಕನ್ನಡಿಗರ ಈ ಕೋಪದಿಂದ ಫೋನ್ ಪೇಗೆ ಕೋಟಿಗಳಷ್ಟು ನಷ್ಟವಾಗಿದೆ ಎಂಬ ಮಾತು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿಯೇ ಇಂದು ಇಡೀ ದಿನ ಫೋನ್ ಪೇ ಸ್ಲೋ ಆಗಿದ್ದು, ಇದಕ್ಕೂ ಡಿಲೀಟ್ ಅಭಿಯಾನಕ್ಕೂ ಸಂಬಂಧವಿದೆಯಾ ಎಂಬ ಅನುಮಾನ ವ್ಯಕ್ತವಾಗಿದೆ.

ಆದರೆ, ಇದಕ್ಕೆ ನಿಜವಾದ ಕಾರಣವೇನು ಎಂಬುದನ್ನು ಕಂಪನಿ ಅಧಿಕೃತವಾಗಿ ತಿಳಿಸಿಲ್ಲ, ಒಟ್ಟಾರೆ, ಕನ್ನಡಿಗರ ಆಕ್ರೋಶದ ಕಾರಣಕ್ಕೆ ಫೋಮ್ ಫೆ ‌ಸೇವೆಯಲ್ಲಿ ವ್ಯತ್ಯಯವಾಗಿದೆ ಎಂಬ ಮಾತುಗಳು ಕೇಳಿಬಂದಿದೆ.


Share It

You cannot copy content of this page