ಅಪರಾಧ ಸುದ್ದಿ

ಶಾಲಾ ಬಸ್ ಹರಿದು ಇಬ್ಬರು ಮಕ್ಕಳು ಸಾವು: ತಂದೆಯ ಕಣ್ಣೆದುರೆ ಒದ್ದಾಡಿ ದುರ್ಮರಣ

Share It

ಬೆಂಗಳೂರು: ತಂದೆಯೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ಪುಟಾಣಿ ಮಕ್ಕಳಿಬ್ಬರು ಶಾಲಾ ಬಸ್‌ಗೆ ಸಿಲುಕಿ ಮೃತಪಟ್ಟಿರುವ ಘಟನೆ ನಗರದ ಥಣಿಸಂದ್ರದಲ್ಲಿ ನಡೆದಿದೆ.

ಥಣೀಸಂದ್ರ ಪೊಲೀಸ್ ಕ್ವಾಟ್ರಸ್ ಬಳಿ ಶಾಲಾ ಬಸ್ ಟರ್ನಿಂಗ್ ತೆಗೆದುಕೊಳ್ಳುವಾಗ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬೈಕ್‌ನಲ್ಲಿ ಕುಳಿತಿದ್ದ ಇಬ್ಬರು ಮಕ್ಕಳು ಕೆಳಗೆಬಿದಿದ್ದಾರೆ. ಬಸ್ ಚಾಲಕ ಮುಂದೆ ಚಲಿಸಿದ್ದರಿಂದ ಮಕ್ಕಳಿಬ್ಬರು ಚಕ್ರಕ್ಕೆ ಸಿಲುಕಿಕೊಂಡು ಮೃತಪಟ್ಟಿದ್ದಾರೆ.

ಬಸ್ ಗುದ್ದಿದ ರಭಸಕ್ಕೆ ಬೈಕ್ ಹಿಡಿಯಲು ಯತ್ನಸಿದ ತಂದೆ ಮಕ್ಕಳಿಬ್ಬರು ಬಸ್‌ನ ಚಕ್ರಕ್ಕೆ ಸಿಲುಕಿದ್ದನ್ನು ಕಣ್ಣಾರೆ ಕಂಡು ಸಂಕಟ ಅನುಭವಿಸಿದ್ದಾರೆ. 4 ವರ್ಷದ ಭಾನು ಮತ್ತು ಎರಡು ವರ್ಷದ ವರ್ಷಾ ಎಂಬ ಮಕ್ಕಳು ಮೃತರಾಗಿದ್ದು, ತಂದೆ ಶಾಕ್‌ನಿಂದ ಆಸ್ಪತ್ರೆಗೆ ಸೇರಿದ್ದಾರೆ.


Share It

You cannot copy content of this page