ಬೆಂಗಳೂರು: ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊಸಕೆರೆ ಹಳ್ಳಿ ವಾರ್ಡಿನಲ್ಲಿ “ಪಂಚ ಗ್ಯಾರಂಟಿ ಸಂಪೂರ್ಣ ಜಾರಿ ಶಿಬಿರ”ವನ್ನು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಪ್ರಮೋದ್ ಶ್ರೀನಿವಾಸ್ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.
ಹೊಸಕೆರೆಹಳ್ಳಿ ಬಸ್ ನಿಲ್ದಾಣ & ಮೂಕಾಂಬಿಕಾ ನಗರ ಸರ್ಕಲ್ ಬಳಿ ಇದ್ದ ಶಿಬಿರದ ಸ್ಥಳಕ್ಕೆ ತಂಡೋಪ ತಂಡವಾಗಿ ಜನರು ಆಗಮಿಸಿ ಗ್ಯಾರಂಟಿ ಯೋಜನೆಗೆ ನೋಂದಾವಣಿ ಮಾಡಿಸಿಕೊಂಡರು, ಗ್ಯಾರಂಟಿ ಯೋಜನೆಯ ಫಲಾನುಭವಿಗಳು ತಾಂತ್ರಿಕ ಸಮಸ್ಯೆ ಇದ್ದಲ್ಲಿ ಅದನ್ನ ಶಿಬಿರದಲ್ಲಿ ಹಂಚಿಕೊಂಡರು.
ಈ ಶಿಬಿರಕ್ಕೆ ಅತಿ ದೊಡ್ಡ ಬೆಂಬಲ ಕೊಟ್ಟ ಹೆಚ್. ನಾರಾಯಣ್, ಮಾಜಿ ಕಾರ್ಪೊರೇಟರ್, ಅವರ ಜೊತೆಗೆ ಹೊಸಕೆರೆ ಹಳ್ಳಿ ವಾರ್ಡ್ ಅಧ್ಯಕ್ಷರು ನವೀನ್, ನಟರಾಜ್, ಶಿವಣ್ಣ, ಮೂರ್ತಿ, ಯೂತ್ ಮಹಿಳಾ ಕಾಂಗ್ರೆಸ್ ಜನರಲ್ ಸೆಕ್ರೆಟರಿ ಚೈತ್ರ ಅವರು ಹಾಗೂ ಇತರ ಹಿರಿಯ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು, ಉಪಸ್ಥಿತರಿದ್ದು ಈ ಶಿಬಿರ ಯಶಸ್ವಿಯಾಗಿ ನಡೆಯುವಂತೆ ನೋಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಮೋದ್ ಶ್ರೀನಿವಾಸ್, ಈ ನಮ್ಮ ಹೊಸ ಪ್ರಯತ್ನಕ್ಕೆ ಜೊತೆಯಾದ ಎಲ್ಲಾ ಹೊಸಕೆರೆಹಳ್ಳಿ ವಾರ್ಡಿನ ಜನತೆಗೆ ಧನ್ಯವಾದಗಳು. ಕ್ಷೇತ್ರದಾದ್ಯಂತ ಇಂತಹದ್ದೇ ಕಾರ್ಯಕ್ರಮ ಆಯೋಜನೆ ಮಾಡಲು ತೀರ್ಮಾನಿಸಿದ್ದು, ಎಲ್ಲರಿಗೂ ಗ್ಯಾರಂಟಿ ಫಲ ಸಿಗಲು ಅವಕಾಶ ಸಿಗುವಂತೆ ಮಾಡಲಾಗುವುದು ಎಂದರು.
ನಮ್ಮ ಸರಕಾರ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಐದು ಗ್ಯಾರಂಟಿಗಳನ್ನು ಜಾರಿ ಮಾಡಲಾಗಿದೆ. ಆದರೆ, ಅದರ ಫಲ ಎಲ್ಲ ಬಡವರಿಗೆ ತಲುಪಬೇಕು ಎಂಬುದು ಸರಕಾರದ ಗುರಿ. ಹೀಗಾಗಿ, ಅನುಷ್ಠಾನ ಸಮಿತಿ ಮೂಲಕ, ಜಾರಿ ಮತ್ತು ಅದರ ಆಗುಹೋಗುಗಳನ್ನು ತಿಳಿಯಲು ಗ್ಯಾರಂಟಿ ಫಲಾನುಭವಿಗಳ ಬಳಿಗೆ ತೆರಳಿ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ ಎಂದರು.