ಸುದ್ದಿ

ರಾಜ್ಯಾದ್ಯಂತ ನಾಳೆಯಿಂದ ಕಡಿಮೆಯಾಗಲಿದೆ ಮಳೆ ಅಬ್ಬರ

Share It

ಬೆಂಗಳೂರು: ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ತುಸು ಹೆಚ್ಚಿದೆ. ಆದರೆ ಜುಲೈ 24ರ ಬಳಿಕ ಕೊಂಚ ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದ್ದು, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಕಲಬುರಗಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ವಿಜಯನಗರ, ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಹಾಸನ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಹಾವೇರಿ, ಗದಗ, ಧಾರವಾಡ, ಬೀದರ್​ ಜಿಲ್ಲೆಗಳಲ್ಲಿ ಕೂಡ ಮಳೆಯಾಗಲಿದೆ.

ಆದಾಗ್ಯೂ ನಿನ್ನೆಯವರೆಗೆ ಕ್ಯಾಸಲ್​ರಾಕ್, ಹೊನ್ನಾವರ, ಆಗುಂಬೆ, ಸಿದ್ದಾಪುರ, ಉಡುಪಿ, ಧರ್ಮಸ್ಥಳ, ಲಿಂಗನಮಕ್ಕಿ, ಕಮ್ಮರಡಿ, ಹುಂಚದಕಟ್ಟೆ, ಕೊಟ್ಟಿಗೆಹಾರ, ಕುಂದಾಪುರ, ಕುಮಟಾ, ಲೋಂಡಾ, ಕೊಪ್ಪದಲ್ಲಿ ಭಾರಿ ಮಳೆಯಾಗಿದೆ.

ಗೋಕರ್ಣ, ಕಾರ್ಕಳ, ಕೋಟ, ಭಾಲ್ಕಿ, ಕದ್ರಾ, ಜೋಯಿಡಾ, ಬನವಾಸಿ, ಬೆಳ್ತಂಗಡಿ, ಮಂಕಿ, ಕಿರವತ್ತಿ, ಸೋಮವಾರಪೇಟೆ, ಯಲ್ಲಾಪುರ, ಅಂಕೋಲಾ, ಶಿರಾಲಿ, ನಿಪ್ಪಾಣಿ, ತ್ಯಾಗರ್ತಿ, ಹಳಿಯಾಳ, ಬಾಳೆಹೊನ್ನೂರು, ಮಂಠಾಳ, ಆನವಟ್ಟಿ, ಮುಲ್ಕಿ, ಔರಾದ್, ಪುತ್ತೂರು, ಸೇಡಬಾಳ, ಎನ್​ಆರ್​ಪುರ, ಪೊನ್ನಂಪೇಟೆ, ಕಂಪ್ಲಿ, ಅರಕಲಗೂಡು, ಸುಳ್ಯ, ಸಂಕೇಶ್ವರ, ಗೋಕಾಕ್, ಕಲಘಟಗಿ, ಚಿಂಚೋಳಿ, ಹುಕ್ಕೇರಿ, ಕುಷ್ಟಗಿ, ರಾಯಭಾಗ, ಲಕ್ಷ್ಮೇಶ್ವರ, ಕಕ್ಕೇರಿ, ಸವಣೂರು, ಕಮಲಾಪುರ, ಕುಡತಿನಿ, ಚಿಕ್ಕಮಗಳೂರು, ಭದ್ರಾವತಿ, ಸಂಡೂರು, ತರೀಕೆರೆಯಲ್ಲಿ ಮಳೆಯಾಗಿದೆ.


Share It

You cannot copy content of this page