ಬೆಂಗಳೂರು: ದೇಶದಲ್ಲಿ ಪೋಷಕಾಂಶಗಳ ಕೊರತೆಯಿಂದ ನರಳು ಮಕ್ಕಳ ಸಂಖ್ಯೆ ಗಣನೀಯವಾಗಿದೆ. ಈ ನಡುವೆ ಶಾಲಾ ಮಕ್ಕಳಿಗೆ ಮೊಟ್ಟೆ ನೀಎಉವ ಮೂಲಕ ವಿಪ್ರೋ ವಿನೂತನ ಕಾರ್ಯವೊಂದಕ್ಕೆ ಮುನ್ನುಡಿ ಬರೆದಿದೆ.
ಬಹುರಾಷ್ಟ್ರೀಯ ಕಂಪನಿಗಳೆನಿಸಿಕೊಂಡು ಕನ್ನಡ ನಾಡಿನಲ್ಲೇ ಹುಟ್ಟಿದ ಅನೇಕ ಸಂಸ್ಥೆಗಳು ಕನ್ಮಡಿಗರಿಗೆ ಉದ್ಯೋಗ ಮೀಸಲಾತಿ ವಿಷಯ ಕೇಳುತ್ತಿದ್ದಂತೆ ಕೆರಳಿದರೆ, ವಿಪ್ರೋ ಸಂಸ್ಥೆ ರಾಜ್ಯದ ಸುಮಾರು 55 ಲಕ್ಷ ಮಕ್ಕಳಿಗೆ ಮೊಟ್ಟೆ ನೀಡುವ ಕಾರ್ಯಕ್ರಮಕ್ಕೆ ಸರಕಾರದ ಜತೆಗೆ ಕೈ ಜೋಡಿಸಿದೆ.
ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್ ಜೀ ಅವರ ಫೌಂಡೇಶನ್ ಮೂಲಕ ರಾಜ್ಯದ ಸರಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ಪೌಷ್ಠಿಕ ಆಹಾರ ಒದಗಿಸುವ ಯೋಜನೆಗೆ 1500 ಕೋಟಿ ರು.ಗಳ ಅನುದಾನ ಘೋಷಣೆ ಮಾಡಿದೆ. ಆ ಮೂಲಕ ಉಳ್ಳವರ ಬದ್ಧತೆಯೇನು ಎಂಬುದನ್ನು ಅಜೀಂ ಪ್ರೇಮ್ ಜೀಂ ಸಾಬೀತು ಮಾಡಿದ್ದಾರೆ.
ಅಜೀಂ ಪ್ರೇಮ್ ಜೀ ಅವರ ಕಾರ್ಯವನ್ನು ಸಿಎಂ, ಡಿಸಿಎಂ ಸೇರಿ ಮಂತ್ರಿಗಳೆಲ್ಲ ಶ್ಲಾಘಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರಂತೂ ಮೋಹನ್ ದಾಸ್ ಪೈ ಮತ್ತು ಕಿರಣ್ ಮಜುಂದಾರ್ ಷಾ, ಇವರಿಂದ ನೋಡಿ ಕಲೊಯಬೇಕಾದದ್ದು ಬೇಕಾದಷ್ಟಿದೆ ಎಂದು ಕೆಂಡ ಕಾರಿದ್ದಾರೆ. ಕನ್ನಡಿಗರ ಉದ್ಯೋಗ ವಿರೋಧಿಸುವ ಕಂಪನಿಗಳು ಕನ್ನಡಿಗರಿಗೆ ಏನು ಮಾಡಬೇಕು ಎಂಬುದನ್ನು ನೋಡಿ ಕಲಿಯಿರಿ ಎಂದಿದ್ದಾರೆ.
ಈ ನಡುವೆ ವಿಜೃಂಭಣೆಯಿಂದ ಮದುವೆ ಮಾಡಿ, ಕೋಟ್ಯಂತರ ರುಪಾಯಿ ಖರ್ಚು ಮಾಡಿದ ಉದ್ಯಮಪತಿ ಮತ್ತು ಮಕ್ಕಳ ಪೌಷ್ಟಿಕ ಆಹಾರಕ್ಕಾಗಿ 1500 ಕೋಟಿ ನೀಡಿದ ವಿಪ್ರೋ ಸಂಸ್ಥಾಪಕರ ನಡುವೆ ಹೋಲಿಕೆ ಜಾಲತಾಣದಲ್ಲಿ ಜೋರಾಗಿ ನಡೆದಿದೆ. ಆ ಮೂಲಕ ಪ್ರೇಮ್ ಜೀ ಅವರ ಕಾರ್ಯವನ್ನು ಕನ್ನಡಿಗರು ಮೆಚ್ಚಿಕೊಂಡಿದ್ದಾರೆ.