ಸುದ್ದಿ

ದಾಯಾದಿಗಳ ಕಲಹ: ಬಡಿದಾಡಿಕೊಂಡು ಅಣ್ಣತಮ್ಮಂದಿರು ಸಾವು

Share It

ಬೆಳಗಾವಿ : ಅಥಣಿ ತಾಲೂಕಿನ ಖೋತವಾಡಿ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿ ಹೊಡೆದಾಡಿಕೊಂಡ ಇಬ್ಬರೂ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.

ಖೋತವಾಡಿ ಗ್ರಾಮದ ಹನುಮಂತ ರಾಮಚಂದ್ರ ಖೋತ (34)ಮತ್ತು ಖಂಡೋಬಾ ತಾನಾಜಿ ಖೋತ(32) ಮೃತಪಟ್ಟವರು. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಇಬ್ಬರೂ ಸೋಮವಾರ ರಾತ್ರಿ ಜಗಳ ಮಾಡಿಕೊಂಡು ಹೊಡೆದಾಡಿಕೊಂಡಿದ್ದಾರೆ. ನಂತರ ತೀವ್ರ ಗಾಯಗೊಂಡಿರುವ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಜಮೀನಿಗೆ ಸಂಬಂಧಿಸಿ ಕೆಲವು ದಿನಗಳಿಂದ ವಿವಾದ ಇತ್ತು. ಗ್ರಾಮದ ಹಿರಿಯರು ಸಂಧಾನ ಮಾಡಿದ್ದರು. ಆದರೂ ತಕರಾರು ಕಾಣಿಸಿಕೊಂಡ ಕಾರಣ ಇಬ್ಬರೂ ಜಗಳ ಮಾಡಿಕೊಂಡು ಮೃತಪಟ್ಟಿದ್ದಾರೆ.

ಪ್ರಕರಣದ ವಿವರ : ದಾಯಾದಿಗಳ ಕಲಹ ಸಾವಿನಲ್ಲಿಅಂತ್ಯವಾಗಿದೆ. ಅಣ್ಣ-ತಮ್ಮಂದಿರು ಪರಸ್ಪರ ಹೊಡೆದಾಡಿಕೊಂಡು ಮೃತಪಟ್ಟಿದ್ದಾರೆ.
ಸೋಮವಾರ ತಡರಾತ್ರಿ ಭೂ ವಿವಾದ ಹಿನ್ನೆಲೆಯಲ್ಲಿ ಸಹೋದರ ಸಂಬಂಧಿಕರ ಮಕ್ಕಳ ನಡುವೆ ಗಲಾಟೆ ನಡೆದಿದೆ. ಈ ವೇಳೆ ಒಬ್ಬರಿಗೊಬ್ಬರು ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದಾರೆ.

ಕುಟುಂಬಸ್ಥರು ಇಬ್ಬರನ್ನು ಮಹಾರಾಷ್ಟ್ರ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಕೂಡ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬೆಳಗಾವಿ ಎಸ್‌ಪಿ ಭೀಮಶಂಕರ್ ಗುಳೇದ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಥಣಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.


Share It

You cannot copy content of this page