ಅಪರಾಧ ಸುದ್ದಿ

ಶಾಲೆಗೆ ಚಿರತೆ ನುಗ್ಗಿದ ವದಂತಿ, ಶಾಲೆಗೆ ರಜೆ

Share It

ಬೆಳಗಾವಿ: ಮೂಡಲಗಿ ತಾಲೂಕು ನಾಗನೂರು ಅರಣ್ಯ ಸಿದ್ದೇಶ್ವರ ತೋಟದ ಸಿದ್ದಪ್ಪ ಜಾವಲಿ ಎಂಬವರ ಗದ್ದೆಯಲ್ಲಿ ಮಂಗಳವಾರ ಚಿರತೆ ಪ್ರತ್ಯಕ್ಷವಾಗಿತ್ತು ಎಂಬ ಸಾಮಾಜಿಕ ಜಾಲತಾಣದಲ್ಲಿನ ವಿಡಿಯೋ ವೈರಲ್ ಆದ ಘಟನೆಗೆ ಸಂಬಂಧಿಸಿದ ಕೊನೆಗೂ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿ ಸಂಜು ಸವಸುದ್ದಿ ಅವರು ಪರಿಶೀಲನೆ ನಡೆಸಿದರು.

ಅದು ಚಿರತೆ ಅಲ್ಲ ಕಾಡು ಬೆಕ್ಕು ಎಂದು ಹೇಳಿದರು. ಆದರೂ ಚಿರತೆ ಓಡಾಡಿದ ಸುದ್ದಿ ಹರಡಿದ ಕಾರಣ ಪಕ್ಕದಲ್ಲಿರುವ ಅರಣ್ಯ ಸಿದ್ದೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಹಿತ ದೃಷ್ಟಿಯಿಂದ ಶಾಲೆಗೆ ಬುಧವಾರದಂದು ತಹಸೀಲ್ದಾರ ಮಹದೇವ ಸನ್ನಮುರಿ ಅವರ ಸೂಚನೆ ಮೇರೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮಣ್ಣಿಕೇರಿ ಅವರು ರಜೆ ಘೋಷಣೆ ಮಾಡಿದರು.

ಈ ನಡುವೆ ತಹಸೀಲ್ದಾರರು ಒಬ್ಬೊಬ್ಬರಾಗಿ ಸಂಚರಿಸದಂತೆ ಸೂಚನೆ ನೀಡಿದರು. ಮಕ್ಕಳು ಮತ್ತು ಜಾನುವಾರುಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಡಂಗುರ ಸಾರಲಾಗಿದೆ.


Share It

You cannot copy content of this page