ನವಲಗುಂದ : ತಾಲೂಕಿನಲ್ಲಿ ಮಳೆಯ ವಾತಾವರಣದಿಂದ ದಿನದಿಂದ ದಿನಕ್ಕೆ ಡೆಂಗ್ಯೂ ಜ್ವರ ಸೇರಿದಂತೆ ಅನೇಕ ರೋಗ ರೋಚನಗಳು ಹರಡುತ್ತೇವೆ. ಆರೋಗ್ಯ ಇಲಾಖೆ, ಪುರಸಭೆ ಎಚ್ಚರವಹಿಸಿ ಕಾಯ೯ನಿವ೯ಹಿಸಬೇಕೆಂದು ತಹಶೀಲ್ದಾರ ಸುಧೀರ ಸಾಹುಕಾರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ತಾಲೂಕಿನಲ್ಲಿ ಒಟ್ಟು 21 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು ಇದೇ ರೀತಿ ಮುಂದುವರೆದರ್ ಸಾವ೯ಜನಿಕರು ಭಯಭೀತಿಯಲ್ಲಿರಬೇಕಾಗುತ್ತದೆ. ಪುರಸಭೆ ಅಧಿಕಾರಿಗಳು ಸಹ ಸ್ವಚ್ಚತೆ ಜಾಗೃತಿ ಕಾಯ೯ಕ್ರಮಗಳನ್ನು ಹಮ್ಮಿಕೊಳ್ಳಬೇಕು. ತಾಲೂಕಾಡಳಿತದಿಂದ ಡೆಂಗ್ಯೂ ಜ್ವರ, ಇತರೆ ರೋಗಗಳ ಪ್ರಕರಣಗಳು ಹೆಚ್ಚಿಗೆ ಆಗುವುದನ್ನು ತಡೆಯುವತ್ತ ತಾಲೂಕಾ ಅಧಿಕಾರಿಗಳು ತುಂಬಾ ಎಚ್ಚರ ವಹಿಸಬೇಕೆಂದು ಅಧಿಕಾರಿಗಳ ಸಭೆಯಲ್ಲಿ ಖಡಕ ಎಚ್ಚರಿಕೆಯನ್ನು ನೀಡಿದರು.
ಡೆಂಗ್ಯೂ ಜ್ವರ ಇತರೆ ರೋಗಗಳ ಹೆಚ್ಚಿಗೆ ಹರಡುತ್ತಿರುವುದರ ಕುರಿತು ತಾಲೂಕಾಡಳಿತದ ವತಿಯಿಂದ ತೆಗ್ಗಿನಕೇರಿ ಓಣಿಯಿಂದ ಕಳ್ಳಿಮಠದವರಿಗೆ ಜಾಗೃತಿ ಕಾಯ೯ಕ್ರಮವನ್ನು ಹಮ್ಮಿಕೊಳ್ಳಾಗಿದೆ ಎಂದು ತಹಶೀಲ್ದಾರ ಸುಧೀರ ಸಾಹುಕಾರ ಹೇಳಿದರು.
ಈ ವೇಳೆ ತಾಪಂ ಸಿಬ್ಬಂದಿ, ಆರಕ್ಷಕ ವೃತ್ತ ನಿರೀಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ, ಪುರಸಭೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಿಬ್ಬಂದಿ ಹಾಜರಿದ್ದರು.

