69 ನೇ ಸೌತ್ ಇಂಡಿಯಾ ಫಿಲಂ ಫೇರ್ ಆವಾರ್ಡ್ ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತನಟ ನೆನಪಿರಲಿ ಪ್ರೇಮ್ ಅವರ ಮಗಳು ಅಮೃತಾ ಪ್ರೇಮ್ಗೆ ಬೆಸ್ಟ್ ಡ್ಯೆಬುಟ್ಗೆ ಮೊದಲ ಫಿಲಂ ಫೇರ್ ಆವಾರ್ಡ್ ದೊರೆಯಿತು.
“ಟಗರು ಪಲ್ಯ” ಚಿತ್ರದ ನಟನೆಗೆ ಅಮೃತಾ ಪ್ರೇಮ್ ಅವರಿಗೆ ಮೊದಲ ಅವಾರ್ಡ್ ಸಿಕ್ಕಿದೆ ಅನ್ನೋದು ವಿಶೇಷ. ಇದರಿಂದ ಅವರು ಸಹ ತುಂಬಾ ಖುಷಿಯನ್ನು ವ್ಯಕ್ತಪಡಿಸಿದರು. ಫಿಲಂ ಫೇರ್ ಆವಾರ್ಡ್ ಕಾರ್ಯಕ್ರಮದಲ್ಲಿ ಅಮೃತಾ ಅವರು ಪ್ರಶಸ್ತಿ ಸ್ವೀಕರಿಸಿದ್ದು ಕುಟುಂಬದಲ್ಲಿ ಸಂತೋಷವನ್ನು ಹೆಚ್ಚಿಸಿತು.
ಅಮೃತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಖುಷಿಯನ್ನು ಹಂಚಿಕೊಂಡಿದ್ದು, ಅವರ ಖ್ಯಾತಿ ಇದರಿಂದ ಹೆಚ್ಚಾಗಿದೆ. ಅಮೃತಾ ಅವರ ತಂದೆ ಪ್ರೇಮ್ ಸಹ ಮಾಧ್ಯಮಗಳೊಂದಿಗೆ ಖುಷಿಯನ್ನು ಹಂಚಿಕೊಂಡರು.