ಹೈದರಬಾದ್ : ತೆಲುಗಿನ ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕ ಕೊಮರಿ ಜನಯ್ಯ ನಾಯ್ಡು ಖಾಸಗಿ ಹೋಟೆಲ್ ನಲ್ಲಿ ಮಂಗಳವಾರ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
44 ವರ್ಷದ ಜನಯ್ಯ ನಾಯ್ಡು ರವರು ಹೋಟೆಲ್ ನಲ್ಲಿ ನೇಣು ಬಿಗಿದು ಕೊಂಡಿದ್ದಾರೆ. ಹೋಟೆಲ್ ಸಿಬ್ಬಂದಿಗಳು ಪೊಲೀಸರ ಗಮನಕ್ಕೆ ತಂದಿದ್ದಾರೆ. ಈ ಕುರಿತು ತನಿಖೆ ಆರಂಭವಾಗಿದೆ. ನಾಯ್ಡು ಅವರು ಹಲವಾರು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ತೊಲುಬೊಮ್ಮಲ ಸಿತ್ರಾಲು ಎಂಬ ಸಿನಿಮಾ ನಿರ್ಮಾಣದ ಸಂಸ್ಥೆಯನ್ನು ಸಹ ಕಟ್ಟಿದ್ದರು. ಗಾಡ್ ಸೈಥಾನ್ ಟೆಕ್ನಾಲಜಿ ಎಂಬ ಚಿತ್ರವನ್ನು ಮಾಡಿ ಚಿತ್ರ ವಿಫಲವಾಗಿತ್ತು.
ಸಾವಿಗೆ ನರ್ದಿಷ್ಟ ಕಾರಣ ತಿಳಿದುಬಂದಿಲ್ಲ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು ಹಣಕಾಸಿನ ಸಮಸ್ಯೆಯೇ ಸಾವಿಗೆ ಕಾರಣವ ಅಥವಾ ಬೇರೆ ಏನಾದರೂ ಇದೆಯಾ ಎಂಬ ಸತ್ಯ ಹೊರ ಬರಬೇಕಿದೆ.
ಕಳೆದ ಕೆಲ ದಿನಗಳ ಹಿಂದೆಯಷ್ಟೇ ಭೋಜ್ಪುರಿ ಚಿತ್ರದ ನಟಿ ಅಮೃತ ಪಾಂಡೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಪೊಲೀಸರು ತನಿಖೆ ಶುರು ಮಾಡಿದಾಗ ಪ್ರಕರಣದಲ್ಲಿ ಇದೆ ರೀತಿಯ ಒಂದಷ್ಟು ಗೊಂದಲಗಳು ಉಂಟಾಗಿ ತನಿಖೆ ಇನ್ನು ನಡೆಯುತ್ತಿದೆ.