ವಿಜಯಪುರದಲ್ಲಿ ಇನೋವಾದಿಂದ ಗುದ್ದಿ ವಕೀಲನ ಕೊಲೆ?

394930-lawyer
Share It


ವಿಜಯಪುರ: ನಗರದಲ್ಲಿ ವಕೀಲರೊಬ್ಬರನ್ನು ಹಾಡುಹಗಲಲ್ಲೇ ಇನ್ನೋವಾ ಕಾರಿನಲ್ಲಿ ಗುದ್ದಿ ಸುಮಾರು ಎರಡೂವರೆ ಕಿ.ಮೀ.ದೂರದವರೆಗೆ ಎಳೆದೊಯ್ದಿದ್ದು, ಇದನ್ನು ಕೊಲೆ ಎಂದು ಶಂಕಿಸಲಾಗಿದೆ.

ನಗರದ ಬಸವನಗರದಲ್ಲಿ ಇನ್ನೋವಾ ಕಾರೊಂದು ವಕೀಲ ರವಿ ಮೇಲಿನಮನಿ (37) ಎಂಬುವವರನ್ನು ಗುದ್ದಿದೆ. ಅನಂತರ ಬೈಕ್ ಅನ್ನು ಬಸವನಗರದಿಂದ ಸುಮಾರು ಎರಡೂವರೆ ಕಿ.ಮೀ. ದೂರ ಜಿಲ್ಲಾ ಪಂಚಾಯತ ಗೇಟ್ ವರೆಗೆ ಎಳೆದೊಯ್ದಿದೆ.

ಜಿಪಂ ಗೇಟ್ ಬಳಿ ಬೈಕ್ ಮತ್ತು ರವಿಯನ್ನು ಬಿಟ್ಟು ಇನೋವಾ ಚಾಲಕ ವಾಹನದ ಜತೆ ಪರಾರಿಯಾಗಿದ್ದಾನೆ. ಮೃತಪಟ್ಟ ರವಿ ಭೀಮಾ ತೀರದ ಹಂತಕ ಕುಖ್ಯಾತಿಯ ಭಾಗಪ್ಪನ ಸಂಬಂಧಿಕ ಎಂದು ಹೇಳಲಾಗಿದೆ. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೊಣ್ಣೆವರ, ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದಾರೆ.

ಈ ನಡುವೆ ಪೊಲೀಸರು ಇದೊಂದು ಅಪಘಾತ ಎಂಬಂತೆ ಮೇಲ್ನೋಟಕ್ಕೆ ಕಂಡುಬಂದರೂ, ಎರಡೂವರೆ ಕಿ.ಮೀ. ಎಳೆದೊಯ್ದಿರುವುದು ಮತ್ತು ಅನಂತರ ಪರಾರಿಯಾಗಿರುವುದು ಇದೊಂದು ವ್ಯವಸ್ಥಿತ ಕೊಲೆ ಎಂದು ಕಂಡುಬರುತ್ತಿದೆ. ಮಾಹಿತಿ ಕಲೆ ಹಾಕುತ್ತಿದ್ದು, ಶೀಘ್ರದಲ್ಲೇ ವಾಹನ ಚಾಲಕನನ್ನು ಬಂಧಿಸುವ ಕೆಲಸವಾಗಲಿದೆ ಎಂದು ತಿಳಿಸಿದ್ದಾರೆ.


Share It

You cannot copy content of this page