ಬೆಂಗಳೂರು: ಮೈಸೂರು ನಗರದಲ್ಲಿ ನಡೆಯುತ್ತಿರುವ ಜನಾಂದೋಲನ ಸಮಾರಂಭದಲ್ಲಿ ಜೆಡಿಎಸ್ ನಾಯಕರ ವಿರುದ್ಧದ ಪ್ಲೆಕ್ಸ್ ಅಳವಡಿಕೆ ಮಾಡಿರುವುದನ್ನು ವಿರೋಧಿಸಿ, ತೆರವಿಗೆ ಮುಂದಾದ ಜೆಡಿಎಸ್ ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ.
ಮೂಡಾ ಹಗರಣದ ವಿರುದ್ಧ ಜೆಡಿಎಸ್-ಬಿಜೆಪಿ ಜಂಟಿ ಹೋರಾಟ ಮಾಡುತ್ತಿದ್ದು, ಮೂಡಾದಲ್ಲಿ ಎಚ್.ಡಿ.ದೇವೇಗೌಡರ ಕುಟುಂಬಸ್ಥರು ಮತ್ತು ಸಂಬAಧಿಕರು ಪಡೆದಿರುವ ಸೈಟ್‌ಗಳ ವಿವರಗಳನ್ನು ಪ್ಲೆಕ್ಸ್ಗಳ ಮೂಲಕ ನಗರದಲ್ಲಿ ಪ್ರದರ್ಶನ ಮಾಡಲಾಗುತ್ತಿದೆ.
ಕಾಂಗ್ರೆಸ್‌ನ ಈ ಕ್ರಮವನ್ನು ವಿರೋಧಿಸಿ, ಜೆಡಿಎಸ್ ನಾಯಕರನ್ನು ಪ್ಲೆಕ್ಸ್ಗಳನ್ನು ತೆರವುಗೊಳಿಸುವ ಪ್ರಯತ್ನ ನಡೆಸಿದರು. ಈ ವೇಳೆ ಪೊಲೀಸರು ಅವರನ್ನು ತಡೆದರು. ಆಗ ಪೊಲೀಸರು ಮತ್ತು ಜೆಡಿಎಸ್ ನಾಯಕರ ನಡುವೆ ವಾಗ್ವಾದ ನಡೆಯಿತು.
ಸಾ.ರಾ ಮಹೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆದು, ಪ್ಲೆಕ್ಸ್ ಅಳವಡಿಕೆ ಮಾಡಿರುವ ಕಡೆಯಲ್ಲೆಲ್ಲ ಪ್ರತಿಭಟನೆಗೆ ಮುಂದಾದರು. ಹೀಗಾಗಿ, ಪೊಲೀಸರು ಸಾ.ರಾ. ಮಹೇಶ್ ಮತ್ತು ಇತರೆ ನಾಯಕರನ್ನು ಬಂಧಿಸಿ, ಸಿಆರ್ ಗ್ರೌಂಡ್‌ನಲ್ಲಿಟ್ಟಿದ್ದಾರೆ.

