ಬೆಂಗಳೂರು: ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಆಗಸ್ಟ್ 13 ರಿಂದ 15 ರವರೆಗೆ ಸಂಚಾರ ವ್ಯತ್ಯಯವಾಗಲಿದೆ ಎಂದು ನಮ್ಮ ಮೆಟ್ರೋ ತಿಳಿಸಿದೆ.
ಪೀಣ್ಯ ಇಂಡಸ್ಟ್ರೀ ಮೆಟ್ರೋ ನಿಲ್ದಾಣದಿಂದ ನಾಗಸಂದ್ರ ಮೆಟ್ರೋ ನಿಲ್ದಾಣದವರೆಗೆ 13 ರಂದು ಕೊನೆಯ ರೈಲು ಸೇವೆ ರಾತ್ರಿ11.00 ರ ಬದಲಾಗಿ 10 ಗಂಟೆಯವರಗೆ, 14ರಂದು ಬೆಳಿಗ್ಗೆ 5 ಕ್ಕೆ ಬದಲಾಗಿ 6ಕ್ಕೆ ಅರಂಭವಾಗಲಿದೆ. ಕೊನೆಯ ರೈಲು ಸೇವೆ ರಾತ್ರಿ 11ಕ್ಕೆ ಬದಲಾಗಿ 10 ಗಂಟೆಗೆ ಕೊನೆಗೊಳ್ಳಲಿದೆ. ಆಗಸ್ಟ್ 15ರ ಬೆಳಿಗೆೆ 5ರ ಬದಲಾಗಿ 6 ಕ್ಕೆ ಪ್ರಾರಂಭವಾಗಲಿದೆ.
ನಾಗಸಂದ್ರ ನಿಲ್ದಾಣದಿಂದ 13 ಮತ್ತು 14 ರಂದು ಕೊನೆಯ ರೈಲು ಸೇವೆ ರಾತ್ರಿ 11.05 ಕ್ಕೆ ಬದಲಾಗಿ, 10 ಗಂಟೆಗೆ ಕೊನೆಗೊಳ್ಳಲಿದೆ. 14 ಮತ್ತು 15ರಂದು ನಾಗಸಂದ್ರದಿಂದ ಮೊದಲ ರೈಲು ಸೇವೆ ಬೆಳಿಗ್ಗೆ 5 ರ ಬದಲಾಗಿ 6 ಕ್ಕೆ ಪ್ರಾರಂಭವಾಗುತ್ತದೆ.
ಪೀಣ್ಯ ಇಂಡಸ್ಟ್ರೀಯಿಂದ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳ ನಡುವೆ 13 ಮತ್ತು 14 ರಂದು ರಾತ್ರಿ 11.12 ಗಂಟೆಯವರೆಗೆ ಕೊನೆಯ ರೈಲು ಸೇವೆ ಲಭ್ಯವಿರುತ್ತದೆ. ಪೀಣ್ಯ ಇಂಡಸ್ಟ್ರೀಯಿಂದ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳ ನಡುವೆ ಮೊದಲ ರೈಲು ಸೇವೆ 14 ಮತ್ತು 15 ರಂದು ಬೆಳಿಗ್ಗೆ 5 ಕ್ಕೆ ಪ್ರಾರಂಭವಾಗಲಿದೆ. ಆದರೆ, ನೇರಳೆ ಮಾರ್ಗದ ಮೆಟ್ರೋ ಸೇವೆಗಳಲ್ಲಿ ಯಾವುದೆೇ ಬದಲಾವಣೆ ಇರುವುದಿಲ್ಲ.

