ಅಪರಾಧ ಸುದ್ದಿ

ಏರ್ ಪೋರ್ಟ್ ರಸ್ತೆಯಲ್ಲಿ ವ್ಹೀಲಿಂಗ್ ಮಾಡಿದ ಪುಂಡರ ಬಂಧನ

Share It


ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಏರ್ ಪೋರ್ಟ್ ರಸ್ತೆಯಲ್ಲಿ ವ್ಹೀಲಿಂಗ್ ಮಾಡಿ ಪುಂಡಾಟ ಮೆರೆದಿದ್ದ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಏರ್ ಪೋರ್ಟ್ ರಸ್ತೆ ಸ್ವಾತಂತ್ರ್ಯ ದಿನದ ರಜೆಯ ಕಾರಣಕ್ಕೆ ಬಹುತೇಕ ಖಾಲಿಯಿತ್ತು. ಈ ಸಂದರ್ಭದಲ್ಲಿ ಮೂರು ಬೈಕ್ ಗಳಲ್ಲಿ ಬಂದ ಪುಂಡರು ಬೈಕ್ ಗಳಲ್ಲಿ ವ್ಹೀಲಿಂಗ್ ಮಾಡಿದ್ದರು. ಈ ವಿಡಿಯೋವನ್ನು ಹಿಂಬದಿ ತೆರಳುತ್ತಿದ್ದ ಬೇರೆ ವಾಹನ ಸವಾರರು ರೆಕಾರ್ಡ್ ಮಾಡಿದ್ದರು.

ವಿಡಿಯೋ ಮಾಡುತ್ತಿದ್ದ ಪ್ರಯಾಣಿಕರ ಜತೆಗೆ ಅಸಭ್ಯವಾಗಿ ವರ್ತನೆ ಮಾಡಿದ್ದಲ್ಲದೇ, ಅಸಹ್ಯಕರವಾಗಿ ಬೆರಳು ತೋರಿಸಿದ್ದರು. ಈ ವಿಡಿಯೋ ಆಧಾರದಲ್ಲಿ ಯಲಹಂಕ ಪೊಲೀಸರು ಆರು ಪ್ರಕರಣ ದಾಖಲಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.

ಅದೇ ರೀತಿ ಏರ್ ಪೋರ್ಟ್ ರಸ್ತೆಯಲ್ಲಿ ವ್ಹೀಲಿಂಗ್ ಮಾಡಿದ ಸಂಬಂಧ ದೇವನಹಳ್ಳಿ ಪೊಲೀಸರು ಒಂಬತ್ತು ಪ್ರಕರಣಗಳನ್ನು ದಾಖಲು ಮಾಡಿದ್ದರು. ರಜೆ ದಿನಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಪೊಲೀಸರು ಮುಂದಾಗಿದ್ದಾರೆ.


Share It

You cannot copy content of this page