ಬೆಂಗಳೂರು: ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ಬೆನ್ನಲ್ಲೇ ಅನೇಕ ಅಹಿಂದ ಸ್ವಾಮೀಜಿಗಳು ಭೇಟಿ ನೀಡಿದ್ದು, ಸಿಎಂ ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡಿದ್ದಾರೆ. ಈ ನಡುವೆಯೇ ಅಹಿಂದ ಸಂಘಟನೆಗಳ ಒಕ್ಕೂಟ ಕಾಂಗ್ರೆಸ್ ಹಠಾವೋ ಅಭಿಯಾನ ನಡೆಸುತ್ತಿದೆ.
ಸಿದ್ದರಾಮಯ್ಯ ವಿರುದ್ಧ ಪಿತೂರಿ ನಡೆಯುತ್ತಿದೆ ಎಂದು ಅಹಿಂದ ವರ್ಗದ ಅನೇಕ ನಾಯಕರು ಹೀರಾಟಕ್ಕೆ ಇಳಿದಿದ್ದರೆ, ಕರ್ನಾಟಕ ಅಹಿಂದ ಸಂಘಟನೆಗಳ ಒಕ್ಕೂಟ, ಕಾಂಗ್ರೆಸ್ ಹಠಾವೋ ದಲಿತ್ ಬಚಾವೋ ಅಭಿಯಾನ ಕೈಗೊಂಡಿದೆ.
ಗ್ಯಾರಂಟಿಗಳ ನೆಪದಲ್ಲಿ ಎಸ್ ಸಿ ಪಿ, ಟಿ ಎಸ್ ಪಿ ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದು, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದಲ್ಲಿ ನಡೆದಿರುವ ಗೋಲ್ ಮಾಲ್, ದಲಿತರ ಮೇಲೆ ನಡೆಯುತ್ಯಿರುವ ದೌರ್ಜನ್ಯ ಗಳ ಕುರಿತು ಸರಕಾರದ ಜಾಣ ಮೌನ ಹೀಗೆ ಅನೇಕ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲು ಸಂಘಟನೆ ತೀರ್ಮಾನಿಸಿದೆ.
ವಕೀಲರು ಹಾಗೂ ಹೀರಾಟಗಾರ ಫ್ರೊ. ಹರಿರಾಮ್ ನೇತ್ರತ್ವದಲ್ಲಿ ಅಭಿಯಾನ ಹಮ್ಮಿಕೊಳ್ಳಲು ತೀರ್ಮಾನಿಸಿದ್ದು, ಇಂದು ಆ ಕುರಿತು ಚರ್ಚೆ ನಡೆಸಲು ಸಭೆ ಕರೆಯಲಾಗಿದೆ. ಈ ವೇಳೆ

