ಅಪರಾಧ ಸುದ್ದಿ

ಅಪ್ರಾಪ್ತನಿಗೆ ಬೈಕ್ ಕೊಟ್ಟ ಅಪ್ಪನಿಗೆ 25 ಸಾವಿರ ದಂಡ

Share It


ದಾವಣಗೆರೆ: ಅಪ್ರಾಪ್ತ ಮಗನಿಗೆ ಬೈಕ್ ಚಾಲನೆ ಮಾಡಲು ಕೊಟ್ಟ ತಂದೆಗೆ ದಾವಣಗೆರೆ ನ್ಯಾಯಾಲಯ 25 ಸಾವಿರ ರೂಪಾಯಿ ದಂಡ ವಿಧಿಸಿದೆ.

ದಾವಣಗೆರೆ ಪೊಲೀಸರು ಇತ್ತೀಚೆಗೆ ವಿಶೇಷ ಕಾರ್ಯಾಚರಣೆ ನಡೆಸಿದ್ದ ವೇಳೆ, ಕಾಲೇಜು ರಸ್ತೆಯಲ್ಲಿ ಬಾಲಕನೋರ್ವ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದ. ಈತನನ್ನು ತಡೆದು ಪೊಲೀಸರು ಪರಿಶೀಲಿಸಿದಾಗ ಆತ ಅಪ್ರಾಪ್ತನೆಂದು ತಿಳಿದು ಬಂದಿತ್ತು.

ಈ ಹಿನ್ನೆಲೆಯಲ್ಲಿ ಅಪ್ರಾಪ್ತನಿಗೆ ಸಾರ್ವಜನಿಕ ರಸ್ತೆಯಲ್ಲಿ ವಾಹನ ಚಲಾಯಿಸಲು ದ್ವಿಚಕ್ರ ವಾಹನ ನೀಡಿದ್ದರಿಂದ ಬೈಕ್ ಜಪ್ತಿ ಮಾಡಲಾಗಿತ್ತು. ಅಲ್ಲದೇ, ಈ ಬಗ್ಗೆ ದಾವಣಗೆರೆ ದಕ್ಷಿಣ ಸಂಚಾರ ಠಾಣೆಯಲ್ಲಿ ಮೋಟಾರು ವಾಹನ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ದಾವಣಗೆರೆ ಸಿಜೆಎಂ ನ್ಯಾಯಾಲಯ ಬೈಕ್ ಮಾಲೀಕ ಗೋರೂರು ಬಾಲಕೃಷ್ಣ ಮಗನಿಗೆ ವಾಹನ ನೀಡಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 25,000 ರೂಪಾಯಿ ದಂಡ ವಿಧಿಸಿದೆ.

ಮೂಲ: lawtime.in


Share It

You cannot copy content of this page