ಬೆಂಗಳೂರು: ಪೊಲೀಸ್ ಠಾಣೆ ಬಳಿಯ ನಡುರಸ್ತೆಯಲ್ಲಿಯೇ ಪತ್ನಿಯನ್ನು ಕೊಂದ ಕಿರಾಕತನೊಬ್ಬನನ್ನು ಕರೋಮಂಗಲ ಪೊಲೀಸರು ಬಂಧಿಸಿದ್ದಾರೆ.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಕೋರಮಂಗಲ ಪೊಲೀಸ್ ಠಾಣೆ ಪಕ್ಕದ ನಡುರಸ್ತೆಯಲ್ಲೇ ಪತ್ನಿಗೆ ಚಾಕು ಇರಿದು ಹತ್ಯೆ ನಡೆಸಿದ್ದ. ಆತನನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೆಲ್ವಿನ್ ಫ್ರಾನ್ಸಿಸ್ ಎಂಬಾತ ಮೇ ೨ ರಂದು ಮಧ್ಯಾಹ್ನ ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು (೨೮) ಎಂಬ ಮಹಿಳೆಯನ್ನು ಕೊಲೆ ಮಾಡಿದ್ದ.
ಕೋರಮಂಗಲದ ೬ನೇ ಬ್ಲಾಕ್‌ನಲ್ಲಿ ವಾಸವಾಗಿದ್ದ ಇಂದು ಹಾಗೂ ಪ್ರಾನ್ಸಿಸ್ ೧೨ ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಇಂದು ಹಾಗೂ ಮೆಲ್ವಿನ್ ಫ್ರಾನ್ಸಿಸ್ ದಂಪತಿಗೆ ಇಬ್ಬರು ಮಕ್ಕಳಿದ್ದು, ಪ್ರಾನ್ಸಿಸ್ ಪೇಂಟಿAಗ್ ಕೆಲಸ ಮಾಡಿಕೊಂಡಿದ್ದರೆ, ಹೆಂಡತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
೫ ತಿಂಗಳ ಹಿಂದೆ ದಂಪತಿ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ, ಮುನಿಸಿಕೊಂಡಿದ್ದ ಇಂದು ಮಕ್ಕಳೊಂದಿಗೆ ತನ್ನ ತಾಯಿ ಮನೆಗೆ ತೆರಳಿದ್ದರು. ಈ ಸಂಬAಧ ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿ, ಅಲ್ಲಿಂದ ಹೊರಬರುವ ವೇಳೆಯಲ್ಲಿಯೇ ಇಂದು ಅವರನ್ನು ಕೊಂದು ಪತಿ ಪ್ರಾನ್ಸಿಸ್ ಓಡಿ ಹೋಗಿದ್ದಾನೆ.
ಗಂಡನ ಮೇಲೆ ಬೇಸತ್ತಿದ್ದ ಹಿಂದೂ ಮೇ ೨ ರಂದು ಕೋರಮಂಗಲ ಪೊಲೀಸ್ ಠಾಣೆಗೆ ತೆರಳಿ ಗಂಡನ ವಿರುದ್ಧ ದೂರು ನೀಡಿದ್ದಳು. ದೂರಿನ ಅನ್ವಯ ಪೊಲೀಸರು ಮೆಲ್ವಿನ್‌ನನ್ನು ಠಾಣೆಗೆ ಬರುವಂತೆ ತಿಳಿಸಿದ್ದರು. ಇದರಂತೆ ಠಾಣೆ ಸಮೀಪ ಬಂದಿದ್ದ ಮೆಲ್ವಿನ್, ದೂರು ನೀಡಿ ಹೊರಬಂದಿದ್ದ ಪತ್ನಿಯನ್ನು ಹಿಂಬಾಲಿಸಿಕೊAಡು ಹೋಗಿ, ಆಕೆಗೆ ಚಾಕುವಿನಿಂದ ಹಲವು ಬಾರಿ ಇರಿದು ಹತ್ಯೆಗೈದು ಪರಾರಿಯಾಗಿದ್ದ.
ಪೊಲೀಸ್ ಠಾಣೆ ಬಳಿಯೇ, ಅದು ದೂರು ನೀಡಿ ಹೊರಬಂದ ನಂತರ ನಡೆದ ಕೊಲೆಯನ್ನು ಗಂಭಿರವಾಗಿ ಪರಿಗಣಿಸಿದ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.