ಅಪರಾಧ ಸುದ್ದಿ

ಉತ್ತರ ಭಾರತದ ಯುವಕನಿಂದ ಮಹಿಳೆಯ ಮೇಲೆ ಅತ್ಯಾಚಾರ, ಕೊಲೆ

Share It


ಬೆಂಗಳೂರು : ಉತ್ತರ ಭಾರತ ಮೂಲದ 19 ವರ್ಷದ ಯುವಕನೊಬ್ಬ ಮಹಿಳೆಯೊಬ್ಬರನ್ನು ಅತ್ಯಾಚಾರವೆಸಗಿ ನಂತರ ಕೊಲೆ ಮಾಡಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ.

ಉತ್ತರ ಭಾರತ ಮೂಲದವರಿಂದ ರಾಜಧಾನಿಯಲ್ಲಿ ಕ್ರೈಂ ಹೆಚ್ಚಾಗುತ್ತಿದೆ ಎಂಬ ಆರೋಪದ ನಡುವೆಯೇ 19 ವರ್ಷದ ಯುವಕ 55 ವರ್ಷದ ಮಹಿಳೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ. ಕುಡಿದ ಆಮಲಿನಲ್ಲಿ ಮಹಿಳೆಯನ್ನು ಎಳೆದೊಯ್ದು ಅತ್ಯಾಚಾರವೆಸಗಿ ಬಳಿಕ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಕುರಿತು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಮೃತಹಳ್ಳಿಯ ವರದರಾಜು ಲೇಔಟ್ನಲ್ಲಿ ವಾಸವಾಗಿದ್ದ 55 ವರ್ಷದ ಮಹಿಳೆ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ. ಮೃತಳ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕುಟುಂಬವೊಂದು ಕೆಲಸ ಅರಸಿಕೊಂಡು ಮೂನರ್ಾಲ್ಕು ವರ್ಷಗಳ ಹಿಂದೆ ನಗರಕ್ಕೆ ಬಂದಿತ್ತು. ಅಮೃತಹಳ್ಳಿಯ ವರದರಾಜು ಲೇಔಟ್ ಶೆಡ್ನಲ್ಲಿ ವಾಸವಾಗಿತ್ತು. 55 ವರ್ಷದ ಮಹಿಳೆ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಏ. 2ರ ರಾತ್ರಿ ಮನೆಯ ಸಮೀಪದಲ್ಲಿದ್ದ ಬಾರ್ಗೆ ಹೋಗಿ ಮದ್ಯ ಸೇವಿಸಿ ಹಿಂತಿರುಗುವಾಗ ಅದೇ ಬಾರ್ನಲ್ಲೇ ಪಾನಮತ್ತನಾಗಿದ್ದ ಉತ್ತರ ಪ್ರದೇಶದ ಗೋರಕ್ಪುರ ಮೂಲದ ಯುವಕ ಮಹಿಳೆಯನ್ನು ಗಮನಿಸಿ ಹಿಂಬಾಲಿಸಿಕೊಂಡು ಬಂದಿದ್ದನು. ಮಾರ್ಗ ಮಧ್ಯೆ ಆಕೆಯನ್ನು ಬೆದರಿಸಿ ಎಳೆದೊಯ್ದು ನಿಮರ್ಾಣ ಹಂತದ ಕಟ್ಟಡದಲ್ಲಿ ಆತ್ಯಾಚಾರವೆಸಗಿ ಬಳಿಕ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದ.

ಮನೆಯಿಂದ ಹೊರಹೋಗಿದ್ದ ಮಹಿಳೆ ರಾತ್ರಿಯಿಡಿ ಬರದಿರುವುದನ್ನ ಕಂಡು ಕುಟುಂಬದವರು ಆತಂಕಕ್ಕೆ ಒಳಗಾಗಿ ಹುಡುಕಾಟ ನಡೆಸಿದರು. ಇದೇ ವೇಳೆ ನಿಮರ್ಾಣ ಹಂತದ ಕಟ್ಟಡದ ಬಳಿ ಕಾಮರ್ಿಕರು ಮಹಿಳೆ ಶವಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಹಿಳೆ ಶವ ನಗ್ನ ಸ್ಥಿತಿಯಲ್ಲಿದ್ದು, ಮುಖ, ಮಮಾರ್ಂಗ ಹಾಗೂ ತಲೆ ಮೇಲೆ ರಕ್ತದ ಕಲೆ ಇರುವುದನ್ನು ಗುರುತಿಸಿದ್ದಾರೆ. ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಯುವಕನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.


Share It

You cannot copy content of this page