ವೈದ್ಯಕೀಯ ತಪಾಸಣೆಗೆ ಬಂಧಿತ ದೇವರಾಜೇಗೌಡ ಹಾಜರು

39
Share It

ಹಾಸನ: ಹೊಳೆನರಸೀಪುರ ಪೊಲೀಸರ ವಶದಲ್ಲಿರುವ ವಕೀಲ ಡಿ.ದೇವರಾಜೇಗೌಡರನ್ನು ಇಂದು ಶನಿವಾರ ಸಂಜೆ ವೈದ್ಯಕೀಯ ತಪಾಸಣೆಗಾಗಿ ಕರೆದೊಯ್ಯಲಾಯಿತು.
ಹೊಳೆನರಸೀಪುರ ಪಟ್ಟಣದ ಸರ್ಕಲ್ ಇನ್ಸ್ ಪೆಕ್ಟರ್ ಕಚೇರಿಯಿಂದ ಪೊಲೀಸ್ ವಾಹನಗಳಲ್ಲಿ ದೇವರಾಜೇಗೌಡರನ್ನು ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಹೊಳೆನರಸೀಪುರ ಸರ್ಕಲ್ ಇನ್ಸ್ ಪೆಕ್ಟರ್ ಕಚೇರಿಯಿಂದ ಹೊರಬಂದಾಗ ದೇವರಾಜೇಗೌಡ ಅವರು ಮಾಧ್ಯಮಗಳೊಂದಿಗೆ ಮಾತಾಡುವ ಉತ್ಸಾಹ ತೋರಿದರೂ ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ. ಅದರೆ ಎಲ್ಲಾ ವರದಿಗಾರರೇ ಹಠಕ್ಕೆ ಬಿದ್ದು ಪೊಲೀಸ್ ವಾಹನಗಳನ್ನು ಹಿಂಬಾಲಿಸಿ ತಾಲ್ಲೂಕು ಆಸ್ಪತ್ರೆ ತಲುಪಿದರು. ಅಸ್ಪತ್ರೆಯ ಮುಖ್ಯದ್ವಾರದ ಬಳಿ ಕೊನೆಗೂ ವರದಿಗಾರರ ಶ್ರಮ
ಫಲಿಸಿತು. ಏಕೆಂದರೆ ವೈದ್ಯಕೀಯ ತಪಾಸಣೆಗೆ ಒಳಗಡೆ ಹೋಗುವ ಮೊದಲು ದೇವರಾಜೇಗೌಡ ‘ಸತ್ಯಕ್ಕೆ ಜಯವಿದೆ’ ಎಂದು ಹೇಳುತ್ತಾ ವಿಕ್ಟರಿ ಸನ್ನೆ ತೋರಿದರು. ವೈದ್ಯಕೀಯ ತಪಾಸಣೆ ನಂತರ ಬಂಧಿತ ದೇವರಾಜೇಗೌಡರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.


Share It

You cannot copy content of this page