ಕ್ರೀಡೆ ಸುದ್ದಿ

ಮತ್ತೊಂದು ಒನ್ ಸೈಡೆಡ್ ಪೈನಲ್ : ಕೆಕೆಆರ್ ಐಪಿಎಲ್ ಚಾಂಪಿಯನ್

Share It

ಚೆನ್ನೈ: ಐಪಿಎಲ್ ಫೈನಲ್‌ ಪಂದ್ಯ ಮತ್ತೊಮ್ಮೆ ಒನ್ ಸೈಡೆಡ್ ಆಗಿದ್ದು, ಕೆಕೆಆರ್ ಸುಲಭ ಗೆಲುವು ಸಾಧಿಸಿ ಹದಿನೇಳನೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತು.

ಚೆನ್ನೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ಸನ್ ರೈಸರ್ಸ್ ಹೈದರಾಬಾದ್ ಗೆ ಬ್ಯಾಟಿಂಗ್ ಗೆ ಆಹ್ವಾನ ನೀಡಿದರು. ಮೊದಲು ಬ್ಯಾಟಿಂಗ್ ನಡೆಸಿದ ಹೈದರಾಬಾದ್ ಟೂರ್ನಿಯಲ್ಲಿ ಈವರೆಗೆ ತೋರಿದ್ದ ಪ್ರದರ್ಶನಕ್ಕೆ ವಿರುದ್ಧವಾದ ಪ್ರದರ್ಶನ ತೋರಿದರು.

ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ್ದ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಕ್ಲಾಸೆನ್, ಸೇರಿದಂತೆ ಪ್ರಮುಖ ಬ್ಯಾಟರ್ ಗಳು ವೈಫಲ್ಯ ಕಂಡರು. ಮಾಕ್ರಂ ಒಂದಷ್ಟು ಪ್ರತಿರೋಧ ತೋರಿದರಾದರೂ, ಉತ್ತಮ ಮೊತ್ತದತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ.

ನಾಯಕ ಪ್ಯಾಟ್‌ ಕಮ್ಮಿನ್ಸ್ ಒಂದಷ್ಟು ಹೊತ್ತು ಬ್ಯಾಟಿಂಗ್ ನಡೆಸಿ, ಅಂತಿಮವಾಗಿ ಹೈದರಾಬಾದ್ ತಂಡ 113 ರನ್ ಗಳಿಗೆ ಆಲೌಟ್ ಆಯಿತು. ಆಂಡ್ರ್ಯೂ ರಸೆಲ್ ಮೂರು ವಿಕೆಟ್ ಪಡೆದು ಮಿಂಚಿದರೆ, ಸ್ಟಾರ್ಕ್ ಮತ್ತು ಅರ್ಷಿತ್ ರಾಣಾ ತಲಾ ಎರಡು ವಿಕೆಟ್ ಪಡೆದರು.

ಗುರಿಯನ್ನು ಬೆನ್ನತ್ತಿದ್ದ ಕೆಕೆಆರ್, ಕೇವಲ 10.3 ಓವರ್ ಗಳಲ್ಲಿ ಗುರಿಯನ್ನು ಮುಟ್ಟಿತು. ಸುನೀನ್ ನರೇನ್ ಅಲ್ಪಮೊತ್ತಕ್ಕೆ ಔಟಾದರೆ, ರೆಹಮಾನುಲ್ಲಾ ಗುರ್ಬಾಜ್ 39 ರನ್ ಗಳಿಸಿದರು‌. ವೆಂಕಟೇಶ್ ಅಯ್ಯರ್‌52 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಗೌತಮ್ ಗಂಭೀರ್ ನಾಯಕತ್ವದಲ್ಲಿ ಟ್ರೋಪಿ ಗೆದ್ದಿದ್ದ ಕೆಕೆಆರ್, ಈಗ ಅವರ ಮೆಂಟರ್ ಶಿಫ್ ನಲ್ಲಿ ಮತ್ತೊಮ್ಮೆ ಚಾಂಪಿಯನ್ ಆಯಿತು. ಒಟ್ಟಾರೆ, ಮುರನೇ ಬಾರಿ ಕೆಕೆಆರ್ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತು.


Share It

You cannot copy content of this page