ಹರಿದ್ವಾರಕ್ಕೆ ಹಿಂದೂಯೇತರರ ಪ್ರವೇಶ ನಿಷೇಧ: ಉತ್ತರಾಖಂಡ ಸರಕಾರದಿಂದ ವಿವಾದಾತ್ಮಕ ತೀರ್ಮಾನ?
ಹರಿದ್ವಾರ: ಹರಿದ್ವಾರದ 105 ಘಾಟ್ ಗಳು ಮತ್ತು ಸುಮಾರು 125 ಚದರ ಕಿ.ಮೀ.ವ್ಯಾಪ್ತಿಯ ಪ್ರದೇಶಕ್ಕೆ ಹಿಂದೂಯೇತರರಿಗೆ ಪ್ರವೇಶ ನಿಷೇಧಿಸಿದೆ.
ಸರಕಾರ ಹೃಷಿಕೇಶ ಮತ್ತು ಹರಿದ್ವಾರವನ್ನು ಸನಾತನ ಪವಿತ್ರ ಸ್ಥಳ ಎಂದು ಘೋಷಣೆ ಮಾಡಲು ಸಹ ಯೋಜನೆ ರೂಪಿಸಿದ್ದು, ಗಂಗಾ ನದಿಯ 105 ಘಾಟ್ ಗಳಲ್ಲಿ ಹಿಂದೂಯೇತರರ ಶವಸಂಸ್ಕಾರ, ಪೂಜೆ ಪುನಸ್ಕಾರಗಳಿಗೆ ನಿರ್ಬಂಧ ವಿಧಿಸಿದೆ.
ಈ ನಿಷೇಧ ಜ.14 ರಂದು ನಡೆಯುವ ಅರ್ಧಕುಂಭ ಪೂಜೆಯ ನಂತರ ಜಾರಿಯಾಗುವ ಸಾಧ್ಯತೆಯಿದೆ ದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಗಂಗಾ ಮಹಾಸಭಾದ ಒತ್ತಾಯದಂತೆ ಈ ತೀರ್ಮಾನ ತೆಗೆದುಕೊಂಡಿದ್ದು, 1916 ರಲ್ಲಿ ಆಗಿದ್ದ ಮದನ್ ಮೋಹನ್ ಮಾಳವೀಯ ಮತ್ತು ಬ್ರಿಟಿಷ್ ಸರಕಾರದ ಒಪ್ಪಂದವನ್ನು ಸರಕಾರ ಉಲ್ಲೇಖಿಸಿದೆ.
ಒಪ್ಪಂದದಂತೆ ಹಿಂದೂಯೇತರರು ಹಿಂದೂ ಘಾಟ್ ಗಳಿಗೆ ತೆರಳುವಂತಿಲ್ಲ ಜತೆಗೆ ಇಲ್ಲಿನ ನಿವಾಸಿಗಳಾಗುವಂತಿಲ್ಲ, ಹೊರಗಿನಿಂದ ಬಂದವರು ತಮ್ಮ ಕೆಲಸ ಮುಗಿಸಿಕೊಂಡು ವಾಪಸ್ ಆಗಬೇಕು. ಇಂತಹ ಧಾರ್ಮಿಕ ಒಪ್ಪಂದವನ್ನು ಮರಳಿ ಜಾರಿಗೆ ತರಲು ಸರಕಾರ ತೀರ್ಮಾನಿಸಿದೆ ಎಂದು ವರದಿ ಉಲ್ಲೇಖಿಸಿದೆ.
ಈಗಾಗಲೇ, ಇಲ್ಲಿಯೇ ವಾಸ ಮಾಡುತ್ತಿರುವ ಹಿಂದೂಯೇತರರನ್ನು ಸರಕಾರ ಒಕ್ಕಲೆಬ್ಬಿಸಲಿದೆಯೇ ಎಂಬ ಆತಂಕವನ್ನು ಸಹ ವ್ಯಕ್ತಪಡಿಸಲಾಗಿದೆ. ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು ಕೂಡ ಸರಕಾರದ ತಮ್ಮ ತೀರ್ಮಾನ್ ಬಗ್ಗೆ ಮಾಹಿತಿ ನೀಡಿದ್ದು, ನಾವು ಪವಿತ್ರ ಸ್ಥಳಗಳನ್ನು ಕಾಪಾಡಲು ಕಟಿಬದ್ಧ ಎಂದು ಹೇಳಿದ್ದಾರೆ.


