ಬೆಂಗಳೂರು: PSI ಹಗರಣ ಹಾಗೂ ಪರೀಕ್ಷಾ ಅಕ್ರಮದ ಪ್ರಮುಖ ಆರೋಪಿಯ ಮನೆಯಲ್ಲಿ ಬಿಜೆಪಿ ಸಂಸದ ಉಮೇಶ್ ಜಾಧವ್ ಅವರ ಭರ್ಜರಿ ಭೋಜನ ಸವಿದಿದ್ದಾರೆ ಎಂದು ಕಾಂಗ್ರೆಸ್ ಬುಧವಾರ ಆರೋಪಿಸಿದ್ದಾರೆ.
ಈ ಕುರಿತ ಫೋಟೋವೊಂದನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, Dear ಬಿಜೆಪಿ ನೀವೇ ಆರ್.ಡಿ ಪಾಟೀಲ್ ನ ರಕ್ಷಕರು, ನೀವೇ ಆತನ ಬ್ಯಾಕ್ ಬೋನ್ ಎನ್ನುವುದು ಮತ್ತೊಮ್ಮೆ ಬಯಲಾಗಿದೆ.
ಕರ್ನಾಟಕ ಕಂಡ ಪ್ರಮುಖ ಹಗರಣದ ರೂವಾರಿಯೊಂದಿಗೆ ಬಿಜೆಪಿಯವರ ಅಕ್ರಮ ಸಂಬಂಧವು ಸಕ್ರಮ ಸಂಬಂಧವಾಗಿ ಬದಲಾಗಿದೆ ಎಂದು ಕಿಡಿಕಾರಿದೆ.
ಬಿವೈ ವಿಜಯೇಂದ್ರ ಅವರೇ, ಪರೀಕ್ಷಾ ಅಕ್ರಮವಾದಾಗ ಆರ್.ಡಿ ಪಾಟೀಲ್ ತಲೆ ಮರೆಸಿಕೊಳ್ಳಲು ಸಹಕರಿಸಿದ್ದು ಯಾರು? ಕೇಶವಕೃಪವೊ? ಜಗನ್ನಾಥ ಭವನವೋ? ಎಂದು ಪ್ರಶ್ನಿಸಿದ್ದು, ಅಕ್ರಮ ದಂಧೆಕೋರನೊಬ್ಬನೊಂದಿಗೆ ಕುಚಿಕು ಕುಚಿಕು ಸಂಬಂಧ ಹೊಂದಿರುವ ಬಿಜೆಪಿ ಕಾಂಗ್ರೆಸ್ ನಾಯಕರ ಮೇಲೆ ಸುಳ್ಳು ಆರೋಪಿಸಿದ್ದಕ್ಕೆ ಇಂದು ಉತ್ತರ ಸಿಕ್ಕಿದೆಯಲ್ಲವೇ? ಎಂದು ಟೀಕಿಸಿದೆ.