ನೀರಿನಲ್ಲಿ ಮುಳುಗಿ ಬಾಲಕ, ರಕ್ಷಣೆಗೆ ಹೋದ ವೃದ್ಧ ಸಾವು
ಚಿಕ್ಕಮಗಳೂರು:ನೀರಿನಲ್ಲಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಣೆ ಮಾಡಲು ಹೋದ ವೃದ್ಧನೂ ನೀರುಪಾಲಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ನಡೆದಿದೆ.
ಕಡೂರು ತಾಲೂಕಿನ ಚಿಕ್ಕಂಗಳ ಗ್ರಾಮದಲ್ಲಿ ದುರಂತ ಸಂಭವಿಸಿದ್ದು, ಮೃತರನ್ನು ಕೃಷ್ಣನಾಯಕ್(೭೦) ಹಾಗೂ ಬಾಲಕ ಆದರ್ಶ್(೧೪) ಎಂದು ಗುರುತಿಸಲಾಗಿದೆ. ಚಿಕ್ಕಂಗಳ ಗ್ರಾಮದ ಕೆರೆಯಲ್ಲಿ ಕುರಿಗಳಿಗೆ ನೀರನ್ನು ಕುಡಿಸಲು ಹೋದ ಬಾಲಕ ಆದರ್ಶ ಮುಳುಗುತ್ತಿರುವುದನ್ನು ಕಂಡು ಕೃಷ್ಣ ನಾಯಕ್ ಕಾಪಾಡಲು ಮುಂದಾಗಿದ್ದರು.
ದುರಾದೃಷ್ಟವಶಾತ್ ಇಬ್ಬರು ಕೆರೆಯ ಗುಂಡಿಯ ಆಳಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಕಡೂರು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಶೋಧ ಕಾರ್ಯ ನಡೆಸಿ, ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ. ಮೃತರ ಕುಟುಂಬಗಳಿಗೆ ಕಡೂರು ಶಾಸಕ ಕೆ. ಎಸ್ ಆನಂದ್, ಚಿಕ್ಕಂಗಳ ಗ್ರಾಮ ಪಂಚಾಯತಿ ಸದಸ್ಯ ಪ್ರಕಾಶ್ ನಾಯಕ್ ಸಾಂತ್ವನ ಹೇಳಿದ್ದಾರೆ.