ಬೆಂಗಳೂರು: ಮೆಜೆಸ್ಟಿಕ್ನ ಅಮರ್ ಹೋಟೆಲ್ ಬಳಿ ನಿಲ್ಲಿಸಿದ್ದ ಖಾಸಗಿ ಬಸ್ವೊಂದರಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಎಸ್.ಜೆ.ಕಂಪಾಟರ್್ ಹೆಸರಿನ ಖಾಸಗಿ ಬಸ್ ಅನ್ನು ಮೆಜೆಸ್ಟಿಕ್ನಲ್ಲಿ ನಿಲುಗಡೆ ಮಾಡಲಾಗಿತ್ತು. ಚಾಲಕ, ನಿವರ್ಾಹಕ ಹಾಗೂ ಕ್ಲೀನರ್ ಹೊರ ಹೋಗಿದ್ದರು. ಬಸ್ನಲ್ಲಿ ಯಾರೂ ಪ್ರಯಾಣಿಕರು ಇರಲಿಲ್ಲವಾದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಬಹುದು.
ಬೆಂಕಿ ಹೊತ್ತಿಕೊಂಡಿದ್ದನ್ನು ಕಂಡ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸಿದ್ದಾರೆ. ಈ ವೇಳೆ ಎರಡು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಲು ಕಾರ್ಯಾಚರಣೆ ನಡೆಸಿದವು ಎನ್ನಲಾಗಿದೆ.