ಚನ್ನಗಿರಿ: ಚನ್ನಗಿರಿಯಲ್ಲಿ ಪೊಲೀಸರ ವಶದಲ್ಲಿದ್ದ ಆರೋಪಿ ಸಾವಿನ ಪ್ರಕರಣ ಲಾಕಪ್ ಡೆತ್ ಅಲ್ಲ ಎಂದು ಸರಕಾರ ದೃಢೀಕರಿಸಿದೆ.
ಮಟ್ಕಾ ನಡೆಸುತ್ತಿದ್ದ ಆರೋಪದಲ್ಲಿ ಆದಿಲ್ ಎಂಬಾತನನ್ನು ಚನ್ನಗಿರಿ ಪೊಲೀಸರು ಬಂಧಿಸಿ ಕರೆತಂದಿದ್ದರು. ಆತ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಕುಸಿದು ಬಿದ್ದು, ಪ್ರಾಣ ಬಿಟ್ಟಿದ್ದ. ಆತನ ಸಂಬAಧಿಕರು ಲಾಕಪ್ ಡೆತ್ ಎಂದು ಆರೋಪಿಸಿ, ಪ್ರತಿಭಟನೆ ನಡೆಸಿ, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಪ್ರತಿಭಟನೆ ವಿಕೋಪಕ್ಕೆ ತಿರುಗಿ, ಪೊಲೀಸ್ ಜೀಪ್ ಮೇಲೆ ಕಲ್ಲು ತೂರಾಟ, ಪೋಲೀಸ್ ಠಾಣೆಯಲ್ಲಿ ಗದ್ದಲದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನೇ ಬಳಸಿಕೊಂಡ ಪ್ರೆತಿಪಕ್ಷ ಬಿಜೆಪಿ, ಲಾಕಪ್ ಡೆತ್ ಪ್ರಕರಣ ಎಂದು ಸರಕಾರದ ವಿರುದ್ಧ ಹೋರಾಟಕ್ಕೆ ಇಳಿದಿತ್ತು.
ಆದರೆ, ಸರಕಾರ ಈ ಆರೋಪವನ್ನು ತಳ್ಳಿ ಹಾಕಿದ್ದು, ಆರೋಪಿ ವಶಕ್ಕೆ ಪಡೆದ ಕೇವಲ ೬ ನಿಮಿಷದಲ್ಲಿ ಕುಸಿದುಬಿದ್ದಿದ್ದಾನೆ. ಆತನಿಗೆ ಮೂರ್ಛೆ ರಓಗ ಇತ್ತು ಎಂದು ಹೇಳಲಾಗುತ್ತಿದೆ. ಆತನನ್ನು ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಿದರೂ, ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ಸ್ಪಷ್ಟನೆ ನೀಡಿದೆ.
ನ್ಯಾಯಾಧೀಶರ ಸಮ್ಮುಖದಲ್ಲಿ ಶವಪರೀಕ್ಷೆ:
ಆರೋಪಿ ಆದಿಲ್ ಸಂಬAಧಿಕರ ಆರೋಪದ ಕಾರಣದಿಂದಾಗಿ, ನ್ಯಾಯಾಧೀಶರ ಸಮ್ಮುಖದಲ್ಲೇ ಶವಪರೀಕ್ಷೆ ನಡೆಸಲಾಯಿತು. ಕುಟುಂಬಸ್ಥರು ನನ್ನ ಮಗನ ಸಾವಿಗೆ ಪೊಲೀಸರೇ ಕಾರಣ, ಆತನಿಗೆ ಯಾವುದೇ ಮೂರ್ಛೆ ರೋಗ ಇರಲಿಲ್ಲ, ಶವಪರೀಕ್ಷೆ ವರದಿ ಬರಲಿ, ಆಗ ಗೊತ್ತಾಗುತ್ತದೆ. ನಮಗೆ ನ್ಯಾಯ ಕೊಡಿಸುವಂತೆ ನ್ಯಾಯಾಧೀಶರನ್ನು ಮತ್ತು ಸರಕಾರವನ್ನು ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.