ರಾಜಕೀಯ ಸುದ್ದಿ

ಡಾ.ಮಮ್ತಾ ಸಾಗರ್ ಅವರಿಗೆ ಸಿಎಂ ಅಭಿನಂದನೆ

Share It

ಬೆಂಗಳೂರು:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾಗತಿಕ ಸಾಹಿತ್ಯ ಪ್ರಶಸ್ತಿಯನ್ನು ಪಡೆದ ಕವಯತ್ರಿ ಡಾ.ಮಮ್ತಾ ಸಾಗರ್ ಅವರಿಗೆ ಅಭಿನಂದನೆ ಸಲ್ಲಿಸಿದರು.

ಏಪ್ರಿಲ್ 4 ರಿಂದ 6 ರವರೆಗೆ ನೈಜೀರಿಯಾದ ಅಬುಜ ನಗರದಲ್ಲಿ ಜಾಗತಿಕ ಬರಹಗಾರರ ಒಕ್ಕೂಟ ಆಯೋಜಿಸಿದ್ದ ಏಳನೇ ಅಂತಾರಾಷ್ಟ್ರೀಯ ಸಾಹಿತ್ಯೋತ್ಸವದಲ್ಲಿ ಮಮ್ತಾ ಸಾಗರ್ ಅವರು ಜಾಗತಿಕ ಸಾಹಿತ್ಯ ಪ್ರಶಸ್ತಿ ಪಡೆದಿದ್ದು, ಇಂದು ಚಿನ್ನದ ಪದಕ ಮತ್ತು ಪ್ರಶಸ್ತಿ ಪತ್ರ ಸಮೇತ ಕಾವೇರಿಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದರು.

ವೈವಿಧ್ಯತೆಯನ್ನು ಸಂಭ್ರಮಿಸುವ ಮೂಲಕ ಹೊಸ ಏಕತೆಯನ್ನು ಕುರಿತು ಚಿಂತಿಸುವ ಅಗತ್ಯವಿದೆ ಎಂದು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕರೆಕೊಟ್ಟ ಖ್ಯಾತ ಕವಿ ಡಾ. ಮಮ್ತಾ ಸಾಗರ್ ಅವರಿಗೆ ಮಾನ್ಯ ಮುಖ್ಯಮಂತ್ರಿಗಳು ಇಂದು ಅಭಿನಂದಿಸಿದರು.

ಈ ಬಾರಿಯ ಪ್ರತಿಷ್ಠಿತ ಜಾಗತಿಕ ಒಕ್ಕೂಟದ ಗೌರವ ಪ್ರಶಸ್ತಿಯನ್ನು ನೋಬೆಲ್ ಪ್ರಶಸ್ತಿ ವಿಜೇತ ಬರಹಗಾರ ವೋಲೆ ಸೋಯೆಂಕಾ ಅವರಿಗೆ ಘೋಷಿಸಲಾಗಿದೆ.


Share It

You cannot copy content of this page