ಫ್ಯಾಷನ್ ಸಿನಿಮಾ ಸುದ್ದಿ

ವಿನಯ್ ಮತ್ತು ರಜತ್ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿ

Share It

ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಮತ್ತು ರಜತ್‌ನನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ನೀಡಿದೆ.

ಲಾಂಗ್ ಹಿಡಿದ ರೀಲ್ಸ್ ಮಾಡಿದ ಆರೋಪದಲ್ಲಿ ವಿನಯ್ ಮತ್ತು ರಜತ್ ನನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದರು. ನಾಗರಬಾವಿಯ ಸುಡಿಯೋದಲ್ಲಿ ಸ್ಥಳ ಮಹಜರು ನಡೆಸಿ, ನಂತರ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.

ವಿಚಾರಣೆ ನಡೆಸಿದ ನ್ಯಾಯಾಲಯ ಅವರನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ನೀಡಿದೆ. ವಿನಯ್ ಮತ್ತು ರಜತ್ ಪರ ವಕೀಲರು ಅವರ ವೃತ್ತಿಯೇ ನಟನೆಯಾಗಿದ್ದು, ನಟನೆ ಮಾಡಬೇಕಾದರೆ ಮಚ್ಚು ಹಿಡಿಬಾರದು ಎಂದರೆ ಹೇಗೆ? ಹಾಗಾದರೆ, ಅವರು ಎಪಿಎಂಸಿಯಲ್ಲಿ ಮೂಟೆ ಹೊರಬೇಕಾ ಎಂದು ಪ್ರಶ್ನೆ ಮಾಡಿದ್ದರು.

ಸಾಮಾಜಿಕ ಜಾಲತಾಣದಲಿ ಮಾರಕಾಸ್ತçಗಳನ್ನು ಹಿಡಿದು ರೀಲ್ಸ್ ಮಾಡುವುದು ಕಾನೂನು ಬಾಹಿರ ಎಂಬ ವಾದವನ್ನು ಪೊಲೀಸ್ ಪರ ವಕೀಲರು ಮಾಡಿದ್ದು, ಇದನ್ನು ಪುರಸ್ಕಾರ ಮಾಡಿದರೆ, ಇಂತಹ ಪ್ರವೃತ್ತಿ ಬೆಳೆಯುತ್ತದೆ. ಇವರನ್ನು ಅನುಕರಿಸಿ ಮಾರಕಾಸ್ತç ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತದೆ ಎಂದು ವಾದ ಮಾಡಿದ್ದರು.

ನ್ಯಾಯಾಲಯ ವಾದ ವಿವಾದ ಆಲಿಸಿ, ಆರೋಪಿಗಳಾದ ವಿನಯ್ ಮತ್ತು ರಜತ್ ನನ್ನು ಮೂರು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.


Share It

You cannot copy content of this page