ಕೊನೆಯ ಐಪಿಎಲ್ ಪಂದ್ಯವನ್ನಾಡಿದ ಡಿಕೆ ಬಾಸ್ !

4
Share It

ಅಹಮದಾಬಾದ್: ಕೊನೆಯ ಐಪಿಎಲ್ ಆವೃತ್ತಿಯನ್ನಾಡುತ್ತಿರುವ ಆರ್‌ಸಿಬಿಯ ವಿಕೆಟ್ ಕೀಪರ್, ಬೆಸ್ಟ್ ಫಿನಿಷರ್ ಖ್ಯಾತಿಯ ಡಿಕೆ ಬಾಸ್‌ಗೆ ನೆನ್ನೆ ನೆಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಮದ್ಯವೇ ಕೊನೆಯ ಪಂದ್ಯವಾಗಲಿದೆ.

ಈಗಾಗಲೇ ಅಂತಾರಾಷ್ಟಿçÃಯ ಕ್ರಿಕೆಟ್‌ನಿಂದ ದೂರವೇ ಉಳಿದಿರುವ ದಿನೇಶ್ ಕಾರ್ತಿಕ್, ಐಪಿಎಲ್‌ನಿಂದಲೂ ನಿವೃತ್ತಿ ಪಡೆದುಕೊಳ್ಳುವ ಸುಳಿವು ನೀಡಿದ್ದರು. ಹೀಗಾಗಿ, ಈ ಪಂದ್ಯಾವಳಿಯ ಅವರ ಕೊನೆಯ ಪಂದ್ಯಾವಳಿಯಾಗಲಿದೆ ಎಂದು ಹೇಳಲಾಗಿತ್ತು. ಈ ನಡುವೆ ನೆನ್ನೆ ನಡೆದ ಎಲಿಮನೇಟರ್ ಪಂದ್ಯದಲ್ಲಿ ಆರ್‌ಸಿಬಿ ಸೋತ ಕಾರಣಕ್ಕೆ ಅದೇ ಪಂದ್ಯ ಡಿಕೆಗೆ ಕೊನೆಯ ಪಂದ್ಯವಾಗಲಿದೆ.

ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್‌ಸಿಬಿ ಸೋತ ನಂತರ, ಮೈದಾನದಲ್ಲಿ ಕಿಕ್ಕಿರಿದು ಸೇರಿದ ಆರ್‌ಸಿಬಿ ಅಭಿಮಾನಿಗಳ ಕಡೆಗೆ ತಮ್ಮ ಕೈಯ್ಯಲ್ಲಿನ ಗ್ಲೌಸ್‌ಗಳನ್ನು ಮೇಲೆತ್ತಿ ತೋರಿಸುತ್ತಾ, ಡ್ರೆಸ್ಸಿಂಗ್ ರೂಮ್ ಕಡೆಗೆ ನಡೆದರು. ಈ ವೇಳೆ ಭಾವನಾತ್ಮಕವಾಗಿ ನಡೆದುಕೊಂಡ ಅವರನ್ನು ವಿರಾಟ್ ಕೋಹ್ಲಿ ಸೇರಿದಂತೆ ತಂಡದ ಇತರೆ ಆಟಗಾರರು, ತಪ್ಪಿ ಸಂತೈಸಿದರು.

ದಿನೇಶ್ ಕಾರ್ತಿಕ್ ಈವರೆಗೆ ಎಲ್ಲಿಯೂ ಅಧಿಕೃತವಾಗಿ ವಿದಾಯ ಘೋಷಣೆ ಮಾಡಿಲ್ಲ. ಆದರೆ, ಟೂರ್ನಿ ಆರಂಭಕೆಕ ಮೊದಲೇ ಇದು ನನ್ನ ಕೊನೆಯ ಟೂರ್ನಿ ಎಂದು ಹೇಳಿಕೊಂಡಿದ್ದರು. ಟೂರ್ನಿಯ ಆರಂಭದ ಪಂದ್ಯಗಳಲ್ಲಿ ಡಿಕೆ ಬ್ಯಾಟಿಂಗ್ ನೋಡಿದ ಕ್ರಿಕೆಟ್ ಅಭಿಮಾನಿಗಳು ಡಿಕೆ, ಮತ್ತೇ ಟೀಂ ಇಂಡಿಯಾದ ವಿಕೆಟ್ ಆಗಲಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಸುವಂತಹ ಉತ್ತಮ ಆಟ ಆಡುತ್ತಿದ್ದರು.

ಈ ನಡುವೆ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ವೇಳೆ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ನೋಡುತ್ತಿದ್ದ ರೋಹಿತ್ ಶರ್ಮಾ, ಟಿ-೨೦ ವರ್ಲ್ಡ್ ಕಪ್ ಗೆ ಸೆಲೆಕ್ಟ್ ಆಗೋದಕ್ಕೆ ಹೀಗೆ ಆಡ್ತಿದ್ದೀಯಾ ಎನ್ನುವಂತೆ ತಂಡದ ಬಾಗಿಲು ಈಗಲೂ ಡಿಕೆ ಪಾಲಿಗೆ ತೆರೆದಿದೆ ಎಂಬAತೆ ಛೇಡಿಸಿದ್ದರು. ಆದರೆ, ಟಿ-೨೦ ವಿಶ್ವಕಪ್‌ಗೆ ತಂಡ ಘೋಷಣೆಯಾದಾಗ, ಪಟ್ಟಿಯಲ್ಲಿ ದಿನೇಶ್ ಕಾರ್ತಿಕ್ ಹೆಸರಿರಲಿಲ್ಲ.

ಟಿ-೨೦ ವಿಶ್ವಕಪ್ ತಂಡಕ್ಕೆ ಸಂಜು ಸ್ಯಾಮ್ಸನ್ ಮತ್ತು ರಿಷಬ್ ಪಂತ್ ಅವರನ್ನು ಸೆಲೆಕ್ಟ್ ಮಾಡಿದ್ದು, ಇದೀಗ ಅಂತಾರಾಷ್ಟಿçÃಯ ವೃತ್ತಿಜೀವನವೂ ಬಹುತೇಕ ಮುಗಿದಂತಾಗಿದೆ. ಆರ್‌ಸಿಬಿ ಪರವಾಗಿಯೂ ಇದೇ ಕೊನೆಯ ಟೂರ್ನಿಯೆಂದು ಹೇಳಿರುವ ಕಾರಣ, ಮುಂದಿನ ಐಪಿಎಲ್ ಆವೃತ್ತಿಯಿಂದ ಡಿಕೆ, ಬೇರೆ ಯಾವ ಜವಾಬ್ದಾರಿ ನಿಭಾಯಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.


Share It

You cannot copy content of this page