ಅಪರಾಧ ಸಿನಿಮಾ ಸುದ್ದಿ

ಬೆಂಗಳೂರಿನಲ್ಲಿ ನಡೆದಿದ್ದು, ‘ಬರ್ತಡೇ ಪಾರ್ಟಿಯಲ್ಲ, ರೇವ್ ಪಾರ್ಟಿಯೇ’ !

Share It

ಬೆಂಗಳೂರು;ನಗರದ ಹೊರವಲಯದಲ್ಲಿರುವ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸಿಸಿಬಿ ದಾಳಿ ನಡೆಸಿದ್ದ ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದ ನಟನಟಿಯರು, ಇದು ಬರ್ತಡೇ ಪಾರ್ಟಿ ಎಂದಿದ್ದರು, ಇದೀಗ ಇದೊಂದು ರೇವ್ ಪಾರ್ಟಿಯೇ ಎಂದು ಸಾಭೀತಾಗಿದೆ.

ಪಾರ್ಟಿಯಲ್ಲಿ ಭಾಗವಹಿಸಿದ್ದ ಸುಮಾರು 103 ಜನರ ರಕ್ತದ ಸ್ಯಾಂಪಲ್‌ನಲ್ಲಿ 86 ಜನರ ರಕ್ತದಲ್ಲಿ ಡ್ರಗ್ಸ್ ಅಂಶ ಪತ್ತೆಯಾಗಿದೆ. ಆ ಮೂಲಕ ಇದು ಡ್ರಗ್ಸ್ ಸೇವನೆಗೆಂದೇ ಆಯೋಜನೆ ಮಾಡಿದ್ದ ಪಾರ್ಟಿ ಎಂಬುದು ಇದರಿಂದ ಕಂಡುಬರುತ್ತದೆ. ಆದರೆ, ಕೆಲವು ನಟನಟಿಯರು, ಇದೊಂದು ಬರ್ತಡೇ ಪಾರ್ಟಿ ಎಂದು ವಾದಿಸಿದ್ದರು. ಅದು ಸುಳ್ಳು ಎಂಬುದು ಇದರಿಂದ ಗೊತ್ತಾಗುತ್ತದೆ.

ರಾತ್ರಿಯಿಡೀ ನಡೆಸಲು ಆಯೋಜನೆಯಾಗಿದ್ದ, ಪಾರ್ಟಿಯಲಿ ಭಾಗವಹಿಸಿದ್ದ ಸುಮಾರು 103 ಜನರ ರಕ್ತದ ಮಾದರಿಯನ್ನು ಸಿಸಿಬಿ ಸಂಗ್ರಹ ಮಾಡಿತ್ತು. ಇದರಲ್ಲಿ ನಟಿ ಹೇಮಾ, ಆಶು ರೈ ಮೊದಲಾದ ತೆಲುಗು ನಟಿಯರಿದ್ದರು. ಡ್ರಗ್ಸ್ ಪೆಡ್ಲರ್‌ಗಳು ಮತ್ತು ಆಯೋಜಕರನ್ನು ವಶಕ್ಕೆ ಪಡೆದಿದ್ದ ನಟನಟಿಯರ ರಕ್ತದ ಮಾದರಿ ಸಂಗ್ರಹಿಸಿ ಅವರನ್ನು ಕಳುಹಿಸಿಕೊಡಲಾಗಿತ್ತು.

ಅನಂತರ ಕೆಲವು ನಟನಟಿಯರು ವಿಡಿಯೋ ಮಾಡಿ, ನಾನು ಭಾಗವಹಿಸಿಯೇ ಇಲ್ಲ. ಇದರಲ್ಲಿ ನನ್ನ ಹೆಸರು ಸುಮ್ಮನೆ ತಳುಕು ಹಾಕಿಕೊಂಡಿದೆ ಎಂದು ಮಾತನ್ನಾಡಿದ್ದರು. ಅದರಲ್ಲಿ ಹೇಮಾ ಕೂಡ ಇದ್ದರು. ಆದರೆ, ಇದೀಗ ಅವರ ರಕ್ತದ ಮಾದರಿಯಲ್ಲಿ ಡ್ರಗ್ಸ್ ಅಂಶಗಳು ಪತ್ತೆಯಾಗಿದ್ದು, ಅವರನ್ನು ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆಯಿದೆ.

ಪಾರ್ಟಿ ಮೇಲೆ ದಾಳಿ ನಡೆಸಿದಾಗ, ಗಾಂಜಾ, ಚೆರಸ್ ಮತ್ತು ಎಡಿಎಂಎ ಮಾತ್ರೆಗಳು ದೊರೆತಿದ್ದವು. ಸನ್ ಸೆಟ್ ಟು ಸನ್ ರೈಸ್ ಎಂಬ ಕಾನ್ಸೆಪ್ಟ್ನಲ್ಲಿ ಆಯೋಜಿಸಿದ್ದ ಪಾರ್ಟಿಯಲ್ಲಿ ತೆಲುಗು ಕಿರುತೆರೆಯ ಅನೇಕ ನಟನಟಿಯರು ಭಾಗವಹಿಸಿದ್ದರು. 18 ಜನರನ್ನು ವಶಕ್ಕೆ ಪಡೆದು, ಉಳಿದವರ ಸ್ಯಾಂಪಲ್ಸ್ ಕಲೆಕ್ಟ್ ಮಾಡಲಾಗಿತ್ತು.

ಇದೀಗ ಆ ಸ್ಯಾಂಪಲ್ಸ್ ಪರೀಕ್ಷೆಯ ವರದಿ ಬಂದಿದ್ದು, ಇದರಲ್ಲಿ 86 ಜನ ಡ್ರಗ್ಸ್ ಸೇವನೆ ಮಾಡಿರುವುದು ದೃಢಪಟ್ಟಿದೆ. ರಕ್ತದ ಸ್ಯಾಂಪಲ್ ಪಡೆದಿದ್ದ 73 ಪುರುಷರ ಪೈಕಿ 59 ಪುರುಷರ ರಕ್ತದ ಮಾದರಿಯಲ್ಲಿ ಡ್ರಗ್ಸ್ ಪತ್ತೆಯಾಗಿದೆ. ಇನ್ನು 30 ಯುವತಿಯರ ಪೈಕಿ 27 ಯುವತಿಯರ ರಕ್ತದ ಮಾದರಿಯಲ್ಲಿ ಡ್ರಗ್ಸ್ ಪತ್ತೆಯಾಗಿದೆ. ಪ್ರಕರಣವನ್ನು ಸಿಸಿಬಿ ಕೈಗೆತ್ತಿಕೊಂಡಿದ್ದು, ಈ ಎಲ್ಲರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಯಿದೆ.


Share It

You cannot copy content of this page