ಬೆಂಗಳೂರು: ಕರ್ನಾಟಕ ಸರ್ಕಾರದ ಸಚಿವ ಸಂಪುಟದಲ್ಲಿ ಮಹತ್ವದ ಬದಲಾವಣೆ ನಡೆದಿದೆ. ರಾಜ್ಯ ಸರ್ಕಾರ ಅಧಿಕೃತ ಗಜೆಟ್ ಪ್ರಕಟಣೆ ಮೂಲಕ ಕೆಲವು ಸಚಿವರ ಖಾತೆಗಳಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಬದಲಾವಣೆ ಮಾಡಿದೆ.
ಮುಖ್ಯಮಂತ್ರಿ Siddaramaiah ಅವರ ಬಳಿಯಿದ್ದ ಹಣಕಾಸು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಗುಪ್ತಚರ, ಮಾಹಿತಿ, ಯುವ ಸಬಲೀಕರಣ ಹಾಗೂ ಕ್ರೀಡಾ ಸೇರಿದಂತೆ ವಿವಿಧ ಖಾತೆಗಳು ಮುಂದುವರಿದಿವೆ. ಆದರೆ ಯೋಜನೆ ಮತ್ತು ಅಂಕಿಅಂಶ ಇಲಾಖೆಯನ್ನು ಮುಖ್ಯಮಂತ್ರಿ ಖಾತೆಯಿಂದ ಬೇರ್ಪಡಿಸಲಾಗಿದೆ.
ಇನ್ನು ಸಚಿವ K. Venkatesh ಅವರಿಗೆ ಹೆಚ್ಚುವರಿಯಾಗಿ ಯೋಜನೆ ಮತ್ತು ಅಂಕಿಅಂಶ ಇಲಾಖೆಯ ಜವಾಬ್ದಾರಿ ನೀಡಲಾಗಿದೆ. ಈಗಾಗಲೇ ಅವರ ಬಳಿಯಿದ್ದ ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆಗಳ ಜೊತೆಗೆ ಈ ಹೊಸ ಖಾತೆಯನ್ನೂ ವಹಿಸಿಕೊಳ್ಳಲಿದ್ದಾರೆ.

