ಉಪಯುಕ್ತ ಸುದ್ದಿ

ಗಣತಿ ನಮೂನೆ ಹಿಂತಿರುಗಿಸದಿದ್ದರೆ ಕರಡು ಮತದಾರರ ಪಟ್ಟಿಯಿಂದ ಹೆಸರು ಕೈ ಬಿಡಲಾಗುವುದು : ಅಪರ ಜಿಲ್ಲಾ ಚುನಾವಣಾಧಿಕಾರಿ ಕೆ.ಎನ್. ರಮೇಶ್

Share It

​ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಸಂಬಂಧ ಬಿಎಲ್ಒ ಗಳು ಮನೆ ಮನೆಗೆ ಭೇಟಿ ನೀಡಿ ಎನ್ಯುಮರೇಷನ್ ಫಾರಂ ನೀಡುವ, ಭರ್ತಿ ಮಾಡಿದ ಅರ್ಜಿಗಳನ್ನು ಬಿಎಲ್ಒ ಗಳು ಪಡೆಯುವ ಹಾಗೂ ಭರ್ತಿ ಮಾಡಲಾದ ಅರ್ಜಿಗಳನ್ನು ಡಿಜಿಟಲೀಕರಣಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ ಎಂದು ಅಪರ ಜಿಲ್ಲಾ ಚುನಾವಣಾಧಿಕಾರಿ ಶ್ರೀ ಕೆ.ಎನ್. ರಮೇಶ್ ರವರು ತಿಳಿಸಿದರು.

​ಮನೆ ಮನೆಗೆ ಬಿ.ಎ.ಲ್.ಒ ಭೇಟಿ ಮತ್ತು ನಮೂನೆ ಸಲ್ಲಿಕೆ: ವಿಶೇಷ ಪರಿಷ್ಕರಣೆಯ ಅಂಗವಾಗಿ ಮತಗಟ್ಟೆ ಅಧಿಕಾರಿಗಳು (ಬಿಎಲ್ ಒ) ಮತದಾರರ ಮನೆ ಮನೆಗೆ ಖುದ್ದಾಗಿ ಭೇಟಿ ನೀಡಿ ಗಣತಿ ನಮೂನೆಗಳನ್ನು (Enumeration Forms) ನೀಡುತ್ತಿದ್ದಾರೆ. ಮತದಾರರು ಆ ಫಾರ್ಮ್‌ಗಳಲ್ಲಿ ಕೇಳಲಾಗಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಕಡ್ಡಾಯವಾಗಿ ಮರಳಿ ಬಿ.ಎ.ಲ್‌.ಒಗಳಿಗೇ ಮಾತ್ರ ನೀಡುವಂತೆ ತಿಳಿಸಿದರು.

​ಫಾರ್ಮ್ ಭರ್ತಿ ಮಾಡುವ ವಿಧಾನ (ವಿಡಿಯೋ ಲಿಂಕ್): ಮತದಾರರು ನಮೂನೆಯನ್ನು ಹೇಗೆ ಭರ್ತಿ ಮಾಡಬೇಕೆಂದು ತಿಳಿಯುವ ಸಂಬಂಧ ಸಾರ್ವಜನಿಕರ ನೆರವಿಗಾಗಿ ಭಾರತೀಯ ಚುನಾವಣಾ ಆಯೋಗದ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿರುವ ಮಾರ್ಗದರ್ಶಿ ವಿಡಿಯೋಗಳನ್ನು ವೀಕ್ಷಿಸಬಹುದು. ಆಯೋಗದ ಚಾನೆಲ್‌ನಲ್ಲಿ ಫಾರ್ಮ್ ಭರ್ತಿ ಮಾಡುವ ಹಂತ ಹಂತದ ವಿವರಗಳ ವಿಡಿಯೋಗಳು ಲಭ್ಯವಿರುತ್ತವೆ ಎಂದು ಅವರು ಮಾಹಿತಿ ನೀಡಿದರು.
ಯೂಟ್ಯೂಬ್ ಚಾನೆಲ್‌ ಲಿಂಕ್: https://youtu.be/mN5PRoWva0M?si=xEaxVRnVVjIxrRuM

​ಗಣತಿ ನಮೂನೆಗಳನ್ನು ಹಿಂತಿರುಗಿಸದಿದ್ದರೆ ಕರಡು ಮತ ಪಟ್ಟಿಯಿಂದ ಹೆಸರು ಕೈಬಿಡಲಾಗುವುದು
ಮತದಾರರ ಪಟ್ಟಿಯ ನಿಖರತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಒಂದು ವೇಳೆ ಮತದಾರರು ಬಿ.ಎಲ್.ಒಗಳು ನೀಡಿದ ಗಣತಿ ನಮೂನೆಯನ್ನು (Enumeration Form) ಭರ್ತಿ ಮಾಡಿ ಮರಳಿ ಸಲ್ಲಿಸದೇ ಇದ್ದರೆ, ಅಂತಹವರ ಹೆಸರನ್ನು ಮತದಾರರ ಪಟ್ಟಿಯಿಂದ (Electoral Roll) ತೆಗೆದುಹಾಕಲಾಗುತ್ತದೆ. ಆದ್ದರಿಂದ ಸಾರ್ವಜನಿಕರು ಈ ಪ್ರಕ್ರಿಯೆಯನ್ನು ನಿರ್ಲಕ್ಷಿಸದೆ ಜವಾಬ್ದಾರಿಯಿಂದ ಸಹಕರಿಸಬೇಕು ಎಂದರು.

ಮತದಾರರು ಎಸ್ ಐ ಆರ್ ಕುರಿತಂತೆ ಹಾಗೂ ಮತದಾರರ ಪಟ್ಟಿ ವಿವರಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೆಬ್ ಸೈಟ್ ಲಿಂಕ್ ಗಳ ವೀಕ್ಷಣೆ ಮಾಡಬಹುದಾಗಿದೆ ಎಂದು ಅಪರ ಜಿಲ್ಲಾ ಚುನಾವಣಾಧಿಕಾರಿ ಶ್ರೀ ಕೆ.ಎನ್. ರಮೇಶ್ ತಿಳಿಸಿದರು.


Share It

You cannot copy content of this page