ಉಪಯುಕ್ತ ಸುದ್ದಿ

KSRTC ಗೆ ಅಂತರಾಷ್ಟ್ರೀಯ ಗೋಲ್ಡನ್ ಗ್ಲೋಬ್ ಟೈಗರ್ಸ್ ಅವಾರ್ಡ್ 

Share It

ಬೆಂಗಳೂರು: ಕೆಎಸ್ ಆರ್ ಟಿ ಸಿಗೆ ಅಂತರರಾಷ್ಟ್ರೀಯ Golden Globe Tigers Awards- 2026 ಮಲೇಷಿಯಾ ಮತ್ತು ಫೈನಾನ್ಸಿಯಲ್ ಎಕ್ಸ್ ಪ್ರೆಸ್ ಮೊಬಿಲಿಟಿ-2026 ರ ರಾಷ್ಟ್ರೀಯ ಪ್ರಶಸ್ತಿ ಲಭಿಸಿರುತ್ತದೆ.

ನಿಗಮದಲ್ಲಿ ನೌಕರರಿಗೆ ಪರಿಣಾಮಕಾರಿ ತರಬೇತಿ ಹಾಗೂ ಪಾರದರ್ಶಕ ನೇಮಕಾತಿ ಪ್ರಕ್ರಿಯೆಗಾಗಿ ಅಂತರರಾಷ್ಟ್ರೀಯ “Award for Excellence in Training” ವರ್ಗದಲ್ಲಿ Golden Globe Tigers Awards 2026 ಪ್ರಶಸ್ತಿ ಲಭಿಸಿದೆ.

ನಿಗಮವು ನೌಕರರ ಕೌಶಲ್ಯ ವೃದ್ಧಿಗಾಗಿ ನಿರಂತರ ತರಬೇತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿ, ಕಳೆದ 1 ವರ್ಷದಲ್ಲಿ ಸುಮಾರು 18,600 ಸಿಬ್ಬಂದಿಗೆ ಪರಿಣಾಮಕಾರಿ ತರಬೇತಿ ನೀಡಲಾಗಿದ್ದು, ನಿಗಮದ ಸಮಗ್ರ ವಿಷಯ ನಿರೂಪಣೆಯಲ್ಲಿನ ಬದಲಾವಣೆಗೆ ಸಹಕಾರಿಯಾಗಿದೆ. 

ಇದಲ್ಲದೆ, ನಿಗಮವು ನೇಮಕಾತಿ ಪ್ರಕ್ರಿಯೆಗಳಲ್ಲಿ ಅರ್ಜಿ ಸಲ್ಲಿಕೆಯಿಂದ ಆಯ್ಕೆ ಪ್ರಕ್ರಿಯೆಯವರೆಗೆ, ಘಟಕ ನಿಯೋಜನೆವರೆಗೆ ನೇಮಕಾತಿಯಲ್ಲಿ ಪಾರದರ್ಶಕತೆ ಮತ್ತು ಏಕರೂಪತೆಯನ್ನು ಕಾಪಾಡಿಕೊಳ್ಳುವ ಮೂಲಕ ಮಾನವ ಹಸ್ತಕ್ಷೇಪಕ್ಕೆ ಸಂಪೂರ್ಣ ಕಡಿವಾಣ ಹಾಕಿದೆ.

ದಿನಾಂಕ: 20/05/2026 ರಂದು ಮಲೇಶಿಯಾದ ಕೌಲಾಲಂಪುರ ನಗರದ Pullman Kuala Lumpur City Centre Hotel & Residences ನಲ್ಲಿ ಆಯೋಜಿಸಲಾದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿಗಮಕ್ಕೆ ಪ್ರಶಸ್ತಿ ಪ್ರದಾನ ಮಾಡಲಾಗಿರುತ್ತದೆ.

ನಿಗಮಕ್ಕೆ “Excellence in Public Transportation” ವರ್ಗದಲ್ಲಿ, ಧ್ವನಿಸ್ಪಂದನ ಉಪಕ್ರಮಕ್ಕೆ ರಾಷ್ಟ್ರೀಯ ಮಟ್ಟದ ಫೈನಾನ್ಸಿಯಲ್ ಎಕ್ಸ್ ಪ್ರೆಸ್ ಮೊಬಿಲಿಟಿ 2026 ಪ್ರಶಸ್ತಿ ಲಭಿಸಿದೆ.

ನಿಗಮದ ಮೈಸೂರು ನಗರ ಸಾರಿಗೆಯ 200 ಬಸ್ಸುಗಳಲ್ಲಿ ಧ್ವನಿ ಸ್ಪಂದನ– ಆನ್ಬೋರ್ಡ್ ಬಸ್ ಐಡೆಂಟಿಫಿಕೇಶನ್ ಮತ್ತು ನ್ಯಾವಿಗೇಶನ್ ಸಿಸ್ಟಮ್ ಎಂಬ  ಯೋಜನೆಯನ್ನು GiZ ಜರ್ಮನಿರವರ  ಸಹಯೋಗದೊಂದಿಗೆ ಯಶಸ್ವಿಯಾಗಿ ಜಾರಿಗೆ ತರಲಾಗಿದ್ದು, ದೃಷ್ಟಿ ವಿಕಲ ಚೇತನ ಪ್ರಯಾಣಿಕರ ಪ್ರಯಾಣ ಅವಲಂಬನೆ ಗಣನೀಯವಾಗಿ ಕಡಿಮೆಯಾಗಿದ್ದು, ಅವರ ಆತ್ಮವಿಶ್ವಾಸ, ಭದ್ರತೆ ಮತ್ತು ಸಂಚಾರದ ಸ್ವಾತಂತ್ರ್ಯದಲ್ಲಿ ದೊಡ್ಡಮಟ್ಟದ ಬದಲಾವಣೆಗೆ ಕಾರಣವಾಗಿದೆ.

ದಿನಾಂಕ: 21/05/2026 ರಂದು ನವದೆಹಲಿಯ ದಿ ಲಲಿತ್ ಹೋಟೆಲ್ ನಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿಗಮಕ್ಕೆ ಪ್ರಶಸ್ತಿ ಪ್ರದಾನ ಮಾಡಲಾಯಿತು.


Share It

You cannot copy content of this page